ಮಧ್ಯರಾತ್ರೆ ಪರ್ದಾ ಧರಿಸಿ ಸವಾರಿ: ಹೋಟೆಲ್ ನೌಕರ ಸೆರೆ

0
968

ಸನ್ಮಾರ್ಗ ವಾರ್ತೆ

ಕೇರಳ,ಡಿ.31: ಮಧ್ಯರಾತ್ರೆ ಪರ್ದಾ ಧರಿಸಿ ನಗರದಲ್ಲಿ ಸ್ಕೂಟರಿನಲ್ಲಿ ಸುತ್ತಾಡುತ್ತಿದ್ದ ಹೊಟೇಲ್ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಸ್ಕೂಟರಿನಲ್ಲಿ ಹೋಗಿದ್ದು ಮಹಿಳೆಯೇ ಎಂದು ಇದನ್ನು ನೋಡಿದವರಲ್ಲಿ ಸಂದೇಹವಾಗಿದ್ದು ಪರ್ದಾಧಾರಿಯ ವಿವರವನ್ನು ಕೇಳಬೇಕೆಂದು ಸ್ಕೂಟರ್ ನಿಲ್ಲಿಸಿದಾಗ ಸವಾರ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.

ಸಾಮಾನ್ಯವಾಗಿ ಮಧ್ಯರಾತ್ರೆಯಲ್ಲಿ ಮಹಿಳೆಯರು ಅತ್ತಿತ್ತ ಸುತ್ತಾಡುವುದಿಲ್ಲ. ಕೇರಳದ ಓಮಶ್ಸೇರಿ ನಗರದಲ್ಲಿ ಈ ಘಟನೆ ನಡೆದಿದ್ದು, ನಂತರ ಸ್ಕೂಟರಿನ ಕುರಿತು ತನಿಖೆ ಮಾಡಿದಾಗ ಓಮಶ್ಶೇರಿಯ ಹೊಟೇಲು ಸಿಬ್ಬಂದಿ ಬಾಲಕೃಷ್ಣ ಎಂಬಾತ ಪರ್ದಾ ಧರಿಸಿ ಸ್ಕೂಟರ್‌ನಲ್ಲಿ ತೆರಳಿದ್ದಾಗಿ ಮಾಹಿತಿ ಲಭಿಸಿದೆ. ಇದರ ಹಿಂದೆ ಯಾವ ಉದ್ದೇಶವಿದೆ ಎಂಬುದು ಬಹಿರಂಗವಾಗಿಲ್ಲ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.