ಸನ್ಮಾರ್ಗ ವಾರ್ತೆ
ಕೇರಳ,ಜ.1: ಎರ್ನಾಕುಳಂ ಕರುಮಶ್ಶೇರಿಯ ಬೇಕರಿಯಲ್ಲಿ ಹಲಾಲ್ ಭಕ್ಷಣಗಳು ಲಭ್ಯ ಎಂಬ ಸ್ಟಿಕ್ಕರ್ ಇರಿಸಿದ್ದನ್ನು ತೆಗೆದು ಹಾಕಬೇಕೆಂದು ಬೆದರಿಕೆಯೊಡ್ಡಿದ ಹಿಂದೂ ಐಕ್ಯ ವೇದಿಕೆಯ ನಾಲ್ವರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದು, ಬಂಧಿತರನ್ನು ಹಿಂದೂ ಐಕ್ಯ ವೇದಿ ಪಾರಕ್ಕಡವ್ ಪಂಚಾಯತ್ ಸಮಿತಿ ಅಧ್ಯಕ್ಷ ಅರುಣ್ ಅರವಿಂದ್, ಪ್ರಧಾನ ಕಾರ್ಯದರ್ಶಿ ಧನೆಶ್ ಪ್ರಭಾಕರನ್, ಸುಜಯ್ ಹಾಗೂ ಲೆನಿನ್ ಎಂದು ಗುರುತಿಸಲಾಗಿದೆ.
ಬೇಕರಿಗೆ ಬಂದ ಇವರು ಬೇಕರಿಯ ಮಾಲಕನಿಗೆ ಈ ಬೇಡಿಕೆಯ ಪತ್ರ ಕೊಟ್ಟಿದ್ದಾರೆ. ಮೋಡಿ ಎಂಬ ಹೆಸರಿನ ಬೇಕರಿಯಲ್ಲಿ ಹಲಾಲ್ ಆಹಾರ ಲಭ್ಯವಿದೆ ಎಂದು ಕುರಮಶ್ಶೇರಿಯ ಜೊಯಿಯ ಮಾಲಕತ್ವದ ಬೇಕರಿಯ ಮುಂದೆ ಅಂಟಿಸಿಡಲಾಗಿತ್ತು. ಇದನ್ನು ನೋಡಿದ ಕಾರ್ಯಕರ್ತರು ಹಿಂದೂ ಐಕ್ಯ ವೇದಿಕೆ ಕಾರ್ಯಕರ್ತರು ಅಂಗಡಿ ಮಾಲಕನಿಗೆ ಸಂಘಟನೆಯ ಲೆಟರ್ ಪ್ಯಾಡಿನಲ್ಲಿಯೇ ಪತ್ರ ಕೊಟ್ಟಿದ್ದಾರೆ. ಯಾವುದಾದರೊಂದು ಧರ್ಮದ ಹೆಸರಿನ ಆಹಾರವನ್ನು ಪ್ರತ್ಯೇಕಿಸುವುದು ಅಸ್ಪೃಶ್ಯಾಚಾರವೆಂದು ಇವರು ನೋಟಿಸಿನಲ್ಲಿ ಹೇಳಿದ್ದಾರೆ.
ಪತ್ರಕೊಟ್ಟು ಏಳು ದಿನಗಳೊಳಗೆ ಸ್ಟಿಕ್ಕರ್ ತೆಗೆಯದಿದ್ದರೆ ಅಂಗಡಿಯನ್ನು ಬಹಿಷ್ಕರಿಸುತ್ತೇವೆ, ಪ್ರತಿಭಟನೆ ಮಾಡುತ್ತೇವೆ ಎಂದು ಪತ್ರದಲ್ಲಿತ್ತು. ವಿವಾದ ಬೇಡ ಎಂದು ಅಂಗಡಿ ಮಾಲಕ ಸ್ಟಿಕ್ಕರ್ ತೆಗೆದು ಹಾಕಿದ್ದಾರೆ. ಇದೇವೇಳೆ, ಘಟನೆ ಸಾಮಾಜಿಕ ಮಾಧ್ಯಮದಲ್ಲಿ ಪೊಲೀಸರಿಗೆ ಗಮನಕ್ಕೆ ಬಂದು ಅಂಗಡಿ ಮಾಲಕನ ಹೇಳಿಕೆಯ ಆಧಾರದಲ್ಲಿ ಕೇಸು ಹಾಕಲಾಗಿದೆ. ಘಟನೆಯಲ್ಲಿ ಎಷ್ಟು ಮಂದಿ ಶಾಮೀಲಾಗಿದ್ದಾರೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












