ಸನ್ಮಾರ್ಗ ವಾರ್ತೆ
ಚೆನ್ನೈ,ಜ.8: ಇಲ್ಲಿನ ಕರೂರಿನ ಸಮೀಪದಲ್ಲಿ 22 ವರ್ಷದ ಯುವಕನನ್ನು ಆತನ ಪ್ರೇಯಸಿಯ ಸಂಬಂಧಿಕರು ಬರ್ಬರವಾಗಿ ಕೊಲೆ ಮಾಡಿದ್ದು ಮೃತನನ್ನು ಕರೂರಿನ ಕಾಮರಾಜಪುರಂ ನಿವಾಸಿ ಜಯರಾಮ್ ಎಂಬವರ ಪುತ್ರ ಹರಿಹರನ್ ಎಂದು ಗುರುತಿಸಲಾಗಿದೆ. ಪ್ರಿಯತಮೆಯ ಮೂಲಕ ಆತನನ್ನು ಫೋನ್ ಮಾಡಿ ಕರೆಯಿಸಿಕೊಂಡ ಬಳಿಕ ಹುಡುಗಿಯ ತಂದೆ ವೇಲನ್(43), ವಲಿಯಚ್ಚನ್ ಶಂಕತ್(45), ಮಾವ ವೆಳ್ಳಚ್ಚಾಮಿ(35), ಕಾರ್ತಿಕ್(40) ಎಂಬವರು ಸೇರಿ ಕೊಲೆ ಮಾಡಿದ್ದಾರೆ . ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಕರೂರ್ ಮಾರಿಯಮ್ಮನ್ ಕೊವಿಲ್ ಬೀದಿಯಲ್ಲಿ ಸೆಲೂನ್ ಅಂಗಡಿ ನಡೆಸುತ್ತಿರುವ ಹರಿಹರನ್ ಎರಡು ವರ್ಷದಿಂದ ಯುವತಿಯನ್ನು ಪ್ರೀತಿಸುತ್ತಿದ್ದು ಇತ್ತೀಚೆಗೆ ಮನೆಯವರ ಒತ್ತಡಕ್ಕೆ ಮಣಿದು ಯುವತಿ ಹರಿಹರನ್ನಿಂದ ದೂರುವಾಗಿದ್ದಳು. ಕೆಳ ಜಾತಿಯವನನ್ನು ಮದುವೆ ಆಗಲು ಬಿಡುವುದಿಲ್ಲ ಎಂದು ಕುಟುಂಬ ಹೇಳಿತ್ತು. ಇದೇವೇಳೆ ಹರಿಹರನ್ ಪೋನ್ ಕರೆ ಮಾಡುವುದನ್ನು ನಿಲ್ಲಿಸಿರಲಿಲ್ಲ. ನಂತರ ಯುವತಿಯ ಮೂಲಕ ಫೋನ್ ಮಾಡಿ ಕರೆಯಿಸಿಕೊಂಡು ಯುವತಿಯ ಮುಂದೆಯೇ ಹರಿಹರನ್ನನ್ನು ಕಡಿದು ಕೊಂದು ಹಾಕಿದ್ದಾರೆ.












