ಕೊರೋನಾ ವ್ಯಾಕ್ಸಿನ್ ಮೊದಲು ಮೋದಿ ತೆಗೆದುಕೊಳ್ಳಲಿ: ತೇಜ್‍ಪ್ರತಾಪ್ ಯಾದವ್

0
633

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ದೇಶದಲ್ಲಿ ಗಡಿಬಿಡಿಯಿಂದ ಕೊರೋನಾ ವ್ಯಾಕ್ಸಿನ್‍ಗೆ ಅನುಮತಿ ನೀಡಿರುವುದರ ವಿರುದ್ಧ ರಾಷ್ಟ್ರೀಯ ಜನತಾದಳದ ನಾಯಕ ತೇಜ್‍ಪ್ರತಾಪ್ ಯಾದವ್ ಪ್ರತಿಕ್ರಿಯಿಸಿದ್ದು, ಮೊದಲು ವ್ಯಾಕ್ಸಿನ್ ಪ್ರಧಾನಿ ಮೋದಿ ತೆಗೆದುಕೊಳ್ಳಲಿ. ನಂತರ ಉಳಿದವರು ಅವರನ್ನು ಅನುಸರಿಸಲಿ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮೊದಲ ಡೋಸ್ ಕಡ್ಡಾಯವಾಗಿ ಸ್ವೀಕರಿಸಬೇಕು. ನಂತರ ನಾವೂ ಸ್ವೀಕರಿಸುತ್ತೇವೆ ಎಂದು ಐಎಐ ಸುದ್ದಿಸಂಸ್ಥೆಗೆ ತೇಜ್‍ಪ್ರತಾಪ್ ತಿಳಿಸಿದರು.

ಅವಸರವಸರದಲ್ಲಿ ವ್ಯಾಕ್ಸಿನ್‍ಗೆ ಅನುಮತಿ ಕೊಟ್ಟಿರುವುದರ ಬಗ್ಗೆ ಹಲವು ನಾಯಕರು ಪ್ರತಿಕ್ರಿಯಿಸಿದ್ದು ಕಾಂಗ್ರೆಸ್ಸಿನ ಮನೀಷ್ ತಿವಾರಿ, ಸಮಾಜವಾದಿ ಪಾರ್ಟಿಯ ಅಖಿಲೇಶ್ ಯಾದವ್, ನಾವು ಕೊರೋನಾ ವ್ಯಾಕ್ಸಿನ್ ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ.

ಭಾರತ್ ಬಯೊಟೆಕ್ ಸ್ಥಳೀಯವಾಗಿ ತಯಾರಿಸಿದ ಕೊವಾಕ್ಸಿನ್ ಡ್ರಗ್ಸ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ ಅನುಮತಿ ನೀಡಿರುವುದರ ವಿರುದ್ಧ ಪ್ರತಿಭಟನೆ ಇದು. ಸರಿಯಾಗಿ ಪರೀಕ್ಷೆ ಪೂರ್ತಿಗೊಳಿಸದೆ ವ್ಯಾಕ್ಸಿನ್‍ಗಳಿಗೆ ಅನುಮತಿ ಕೊಡಲಾಗಿದೆ ಎಂದು ಕಾಂಗ್ರೆಸ್ ನ ಹಿರಿಯ ನಾಯಕರಾದ ಶಶಿ ತರೂರ್, ಜೈರಾಮ್ ರಮೇಶ್ ಮುಂತಾದವರು ಆರೋಪಿಸಿದ್ದಾರೆ.