ಭಾರತೀಯರ ವಿದೇಶಿ ಆಸ್ತಿ ತನಿಖೆಗೆ ಕೇಂದ್ರದಿಂದ ವಿಶೇಷ ವಿಭಾಗ ರಚನೆ

0
458

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜ.11: ಭಾರತೀಯರ ವಿದೇಶಿ ಆಸ್ತಿ ಮತ್ತು ಕಪ್ಪು ಹಣ ಹೂಡಿಕೆಯನ್ನು ತನಿಖೆ ಮಾಡಲು ಆದಾಯ ತೆರಿಗೆ ಇಲಾಖೆಯಲ್ಲಿ ಹೊಸ ವಿಭಾಗವನ್ನು ರೂಪಿಸಲಾಗಿದೆ. ಆದಾಯ ತೆರಿಗೆ ಇಲಾಖೆಯ 14ನೇ ತನಿಖಾ ಪ್ರಾಧಿಕಾರದಲ್ಲಿ ಕಾರ್ಯವೆಸಗಲಿರುವ ಫಾರಿನ್ ಆಸೆಟ್ ಇನ್‍ವೆಸ್ಟಿಗೇಶನ್ ಯುನಿಟ್(ಎಫ್‍ಐಐಯು) ಅಧೀನದಲ್ಲಿ ಕೇಂದ್ರ ಸರಕಾರ ಹೊಸ ತನಿಖಾ ತಂಡವನ್ನು ರೂಪಿಸಿದೆ.

ಈಗ ತೆರಿಗೆ ವಂಚನೆ ಪತ್ತೆಮಾಡಲು ಮತ್ತು ಪರಿಶೀಲಿಸಲು ಜಪ್ತಿ ಕ್ರಮಗಳಿಗೂ ಅಗತ್ಯವಾದ ಪ್ರಾಥಮಿಕ ಕ್ರಮಗಳನ್ನು ಮಾತ್ರ ಎಫ್‍ಎಐಯು ಮಾಡುತ್ತಿದೆ. ಆದರೆ ಭಾರತೀಯರ ಕೈಯಲ್ಲಿರುವ ವಿದೇಶಿ ಆಸ್ತಿಗಳಿಗೆ ಸಂಬಂಧಿಸಿದಂತೆ ಕೇಸುಗಳಲ್ಲಿ ಕಪ್ಪುಹಣ ಹೂಡಿಕೆಗೆ ಸಂಬಂಧಿಸಿದ ಕೇಸುಗಳಲ್ಲಿ ಹೊಸ ವಿಭಾಗ ಗಮನ ಹರಿಸಲಿದೆ. ಕಪ್ಪುಹಣ ಹೂಡಿಕೆಗೆ ಸಂಬಂಧಿಸಿದ ಪ್ರಕರಣಗಳತ್ತ ಗಮನ ಕೇಂದ್ರಿಕರಿಸುವುದು ಹೊಸ ತಂಡದ ಹೊಣೆಗಾರಿಕೆಯಾಗಿದೆ. ಇತ್ತೀಚೆಗೆ ಸೋರಿಕೆಯಾದ ಪನಾಮ ದಾಖಲೆಗಳಲ್ಲಿ ಹಲವು ಸಂಸ್ಥೆಗಳು ವಿದೇಶ ಹೂಡಿಕೆಗೆಳ ಕುರಿತು ಹೇಳಿಕೆಗಳು ಬಂದಿದ್ದವು. ಇದೇ ಸಂಸ್ಥೆಗಳ ಕರಿತು ತನಿಖೆ ನಡೆಯಲಿದೆ ಎಂದು ಆದಾಯ ವಿಭಾದ ಅಧಿಕಾರಿಗಳು ತಿಳಿಸಿದ್ದಾರೆ.