ಸನ್ಮಾರ್ಗ ವಾರ್ತೆ
ಚೆನ್ನೈ: ನಾನು ರಾಜಕೀಯ ಪಾರ್ಟಿ ಕಟ್ಟುವುದಿಲ್ಲ. ಈ ತೀರ್ಮಾನದಲ್ಲಿ ನನ್ನ ಬದಲಾವಣೆಯಿಲ್ಲ. ನನ್ನ ತೀರ್ಮಾನ ಅಂತಿಮ ಎಂದು ತಮಿಳು ನಟ ರಜನೀಕಾಂತ್ ಪ್ರತಿಭಟನೆ ನಡೆಸುತ್ತಿರುವ ತಮ್ಮ ಅಭಿಮಾನಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ನಾನು ರಾಜಕೀಯಕ್ಕೆ ಬರುವುದಿಲ್ಲ. ಅದನ್ನು ಮರುಪರಿಶೀಲಿಸಿ ನೋಡುವುದಿಲ್ಲ. ಅಭಿಮಾನಿಗಳು ಪ್ರತಿಭಟನೆ ಕೈಬಿಟಬೇಕು ಎಂದು ರಜನೀಕಾಂತ್ ಹೇಳಿದರು.
ತನಗೆ ಮತ್ತೆ ಮತ್ತೆ ನೋವುಂಟು ಮಾಡಬೇಡಿರಿ ಎಂದು ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು,
ನನ್ನ ಆಸ್ಪತ್ರೆಯ ಪ್ರವೇಶ ದೇವನ ಮುನ್ನೆಚ್ಚರಿಕೆಯಾಗಿತ್ತು. ಅಂಟು ರೋಗದ ನಡುವೆ ಪ್ರಚಾರಕ್ಕೆ ಬಂದರೆ ಆರೋಗ್ಯಕ್ಕೆ ತೊಂದರೆಯಾಗಬಹುದು. ಅಭಿಮಾನಿಗಳು ಶಿಸ್ತಿನಿಂದ ಕಾರ್ಯಕ್ರಮ ಸಂಘಟಿಸಿದ್ದಕ್ಕೆ ಕೃತಜ್ಞತೆ ಇದೆ ಎಂದು ರಜನೀಕಾಂತ್ ಹೇಳಿದರು.
ಡಿಸೆಂಬರ್ 31ಕ್ಕೆ ರಾಜಕೀಯ ಪಕ್ಷವನ್ನು ಘೋಷಿಸುತ್ತೇನೆ ಎಂದು ಹೇಳಿದ್ದ ರಜನೀಕಾಂತ್ ನಂತರ ಆರೋಗ್ಯದ ಕಾರಣಗಳಿಗಾಗಿ ಹಿಂದೆ ಸರಿದಿದ್ದರು.
ಇತ್ತೀಚೆಗೆ ರಕ್ತದೊತ್ತಡದಲ್ಲಿ ಏರುಪೇರಿನ ಕಾರಣದಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಜನೀಕಾಂತ್ ರವರಿಗೆ ಈಗ ಎಪ್ಪತ್ತು ವರ್ಷ ವಯಸ್ಸು.












