ಟ್ರಂಪ್‍ಗೆ ಕ್ಷಮೆಯಿಲ್ಲ: ಇರಾನ್ ನಾಯಕ ಆಯತ್ತುಲ್ಲ ಅಲಿಖಾಮ್‍ನೈ

0
478

ಸನ್ಮಾರ್ಗ ವಾರ್ತೆ

ಟೆಹ್ರಾನ್: ಇರಾನ್ ಸೈನಿಕ ಮುಖ್ಯಸ್ಥ ಜನರಲ್ ಖಾಸಿಂ ಸುಲೈಮಾನ್‍ರನ್ನು ಡ್ರೋನ್ ದಾಳಿಯಿಂದ ಹತ್ಯೆ ಮಾಡಿಸಿದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ಷಮೆಗೆ ಅರ್ಹರಲ್ಲ ಎಂದು ಇರಾನ್ ಪರಮೋಚ್ಛ ನಾಯಕ ಆಯತ್ತುಲ್ಲ ಅಲಿಖಾಮ್‍ನೈ ಹೇಳಿದರು.

“ತಿರುಗೇಟು ನೀಡುವುದು ಅನಿವಾರ್ಯವಾಗಿದೆ. ಸುಲೈಮಾನಿ ಹತ್ಯೆಗೆ ಆದೇಶ ನೀಡಿದ ವ್ಯಕ್ತಿಯೊಂದಿಗೆ ಖಂಡಿತ ಪ್ರತೀಕಾರ ಕೈಗೊಳ್ಳಬೇಕಿದೆ. ಯಾವ ಕ್ಷಣವೂ ಅದು ನಡೆಯಬಹುದು ಎಂದು ನಿರೀಕ್ಷಿಸಬಹುದು” ಎಂದು ಖಾಮ್‍ನೈ ಸಂದೇಶದಲ್ಲಿ ಹೇಳಿದರು. ಅಮೆರಿಕ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಳಿಕ ಟ್ರಂಪ್ ಫ್ಲಾರಿಡಾಕ್ಕೆ ಮರಳಿದ್ದಾರೆ.

ಈ ಹಿಂದೆ ಸುಲೈಮಾನಿಯವರ ಪ್ರಥಮ ವಾರ್ಷಿಕ ಕಾರ್ಯಕ್ರಮದಲ್ಲಿ ಅವರ ಹಂತಕನು ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಹಿಡಿಯುತ್ತೇವೆ ಎಂದು ಜ್ಯೂಡೀಶರಿ ಮುಖ್ಯಸ್ಥ ಇಬ್ರಾಹೀಂ ರೈಸಿ ಮುನ್ನೆಚ್ಚರಿಕೆ ನೀಡಿದ್ದಾರೆ.