ಕಂಗನಾರ ಟ್ವೀಟ್‍ ಅನ್ನು ಡಿಲೀಟ್ ಮಾಡಿದ ಟ್ವಿಟ್ಟರ್

0
484

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ : ಬಾಲಿವುಡ್ ನಟಿ ಕಂಗನಾ ರಾಣಾವತ್‍ರ ಕೆಲವು ಟ್ವೀಟ್‍ಗಳನ್ನು ಟ್ವಿಟರ್ ಪುನಃ ಡಿಲೀಟ್ ಮಾಡಿದೆ. ಟ್ವಿಟರ್ ನಿಯಮವನ್ನು ಉಲ್ಲಂಘಿಸಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಟ್ವಿಟರ್ ಅವರ ವಿರುದ್ಧ ಕ್ರಮ ಜರಗಿಸಿದೆ.
ರೈತ ಹೋರಾಟದ ಕುರಿತು ಅಂತಾರಾಷ್ಟ್ರೀಯ ಸಲೆಬ್ರಿಟಿಗಳ ಟ್ವೀಟನ್ನು ವಿರೋಧಿಸಿ ಕಂಗನಾ ಹಾಕಿದ ಪೋಸ್ಟನ್ನು ಟ್ವಿಟರ್ ತೆಗೆದು ಹಾಕಿದೆ. ಕ್ರಿಕೆಟಿಗ ರೋಹಿತ್ ಶರ್ಮಾರ ಟ್ವೀಟರನ್ನು ಕೂಡ ಟ್ವಿಟರ್ ತೆಗೆದು ಹಾಕಿದೆ. ಪಾಪ್ ಗಾಯಕಿ ರಿಹಾನ್ನರನ್ನು ಮೂರ್ಖಳು ಮತ್ತು ರೈತರನ್ನು ಭಯೋತ್ಪಾದಕರು ಎಂದು ಕಂಗನಾ ಕರೆದಿದ್ದಾರೆ.
ಹಿಂದೂಗಳನ್ನು ಆಕ್ಷೇಪಿಸುವ ಟಿವಿ ಶೋ ನಿರ್ಮಾಪಕರ ತಲೆ ಕಡಿಯಬೇಕೆಂದು ಪೋಸ್ಟ್ ಹಾಕಿದ್ದಕ್ಕಾಗಿ ಕಂಗನಾರ ಖಾತೆಯನ್ನು ಕೆಲವು ಸಮಯ ಟ್ವಿಟರ್ ಅಮಾನತುಗೊಳಿಸಿತ್ತು.