ಸನ್ಮಾರ್ಗ ವಾರ್ತೆ
ಮುಂಬೈ: ಟೂಲ್ಕಿಟ್ ಪ್ರಕರಣದಲ್ಲಿ ಆಕ್ಟಿವಿಸ್ಟ್ ಮತ್ತು ನ್ಯಾಯವಾದಿಯಾಗಿರುವ ನಿಕಿತಾ ಜೇಕಬ್ರ ಬಂಧನಕ್ಕೆ ಮುಂಬೈ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಮೂರು ವಾರದವರೆಗೆ ಬಂಧನಕ್ಕೆ ತಡೆ ನೀಡಿ ಹೈಕೋರ್ಟ್ ಆದೇಶ ಹೊರಡಿಸಿದೆ.
ಪ್ರಕರಣದಲ್ಲಿ ಆರೋಪಿಯಾಗಿರುವ ಆಕ್ಟಿವಿಸ್ಟ್ ಶಾಂತನು ಮುಲುಕ್ರಿಗೂ ಬಂಧನದಿಂದ ಮುಂಬೈ ಹೈಕೋರ್ಟಿನ ಔರಂಗಾಬಾದ್ ಪೀಠ ಸಂರಕ್ಷಣೆ ನೀಡಿ ಆದೇಶ ಹೊರಡಿಸಿತ್ತು. ಬಂಧನದಿಂದ ಹತ್ತು ದಿವಸಗಳ ತಡೆಯಾಜ್ಞೆಯನ್ನು ಕೋರ್ಟ್ ನೀಡಿದೆ. ಈ ನಡುವೆ ನಿರೀಕ್ಷಣಾ ಜಾಮೀನಿಗೆ ದಿಲ್ಲಿ ಕೋರ್ಟನ್ನು ಸಮೀಪಿಸಲು ಔರಂಗಾಬಾದ್ ಪೀಠ ತಿಳಿಸಿದೆ.












