ಸನ್ಮಾರ್ಗ ವಾರ್ತೆ
ಲಂಡನ್: ರೈತರ ಆಂದೋಲನದ ಹೆಸರಿನಲ್ಲಿ ಭಾರತದಲ್ಲಿ ನಡೆಯುತ್ತಿರುವ ಬಂಧನದ ವಿರುದ್ಧ ಬ್ರಿಟನ್ನಲ್ಲಿ ಮತ್ತೊಮ್ಮೆ ಧ್ವನಿ ಎದ್ದಿದ್ದು, ಭಾರತದಲ್ಲಿರುವ ರೈತರ ವಿರೋಧಿ ಪ್ರದರ್ಶನ ಮತ್ತು ಇದಕ್ಕೆ ಸಂಬಂಧಿಸಿ ನಡೆಯುತ್ತಿರುವ ಬಂಧನವನ್ನು ವಿರೋಧಿಸಿ ಬ್ರಿಟನ್ನ ಓರ್ವ ಸಂಸದರು ಬಹಿರಂಗ ಪತ್ರ ಬರೆದಿದ್ದಾರೆ.
ಕ್ಲೌಡಿಯ ವೆಬ್ಬೆ ಲಿಸೆಸ್ಟರ್ ಪ್ರತಿನಿಧಿಯಾಗಿದ್ದು, ವಿಪಕ್ಷ ಲೇಬರ್ ಪಾರ್ಟಿಯ ಸಂಸದೆಯಾಗಿದ್ದಾರೆ. ಭಾರತದಲ್ಲಿ ನಡೆಯುತ್ತಿರುವ ಆಂದೋಲನವನ್ನು ಬೆಂಬಲಿಸಿ ಬ್ರಿಟನ್ ಸರಕಾರ ಹೇಳಿಕೆ ನೀಡಬೇಕೆಂಬ ಮನವಿಗೆ ಕ್ಲೌಡಿಯ ಬೆಂಬಲ ಸೂಚಿಸಿದ್ದಾರೆ.
ಮನವಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಸಹಿ ಹಾಕಿದ್ದು ಇದು ಹೌಸ್ಆಫ್ ಲಾರ್ಡಿನಲ್ಲಿ ಚರ್ಚೆಗೆ ಬರಬೇಕಾದರೆ ಕನಿಷ್ಠ ಒಂದು ಲಕ್ಷ ಸಹಿಯ ಅಗತ್ಯವಿದೆ. ಕ್ಲೌಡಿಯ ಟೂಲ್ಕಿಟ್ ಬಂಧನದ ಬಗ್ಗೆ ನಡೆದ ಪ್ರತಿಕ್ರಿಯಿಸಿದ್ದು ಶೀಘ್ರ ಬಂಧಿತರನ್ನು ಬಿಡುಗಡೆಗೊಳಿಸಬೇಕೆಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಹಾಕಿ ಆಗ್ರಹಿಸಿದ್ದರು. ಟೂಲ್ ಕಿಟ್ ಪ್ರಕರಣದಲ್ಲಿ ಪರಿಸರ ಕಾರ್ಯಕರ್ತೆ ದಿಶಾ ರವಿ ಎಂಬ ಯುವತಿಯನ್ನು ಬೆಂಗಳೂರಿನಿಂದ ಬಂಧಿಸಿ ದಿಲ್ಲಿ ಪೊಲೀಸರು ಕರೆದೊಯ್ದಿದ್ದಾರೆ. ಅಲ್ಲದೇ, ವಕೀಲೆ ನಿಕಿತಾ ಜೇಕಬ್ ಮತ್ತು ಇಂಜಿನಿಯರ್ ಶಾಂತನು ವಿರುದ್ಧ ವಾರಂಟ್ ಜಾರಿ ಮಾಡಲಾಗಿತ್ತು. ಆದರೆ ಬಂಧನಕ್ಕೆ ಮುಂಬೈ ಹೈಕೋರ್ಟು ತಡೆಯಾಜ್ಞೆ ನೀಡಿದೆ. ಮೂರು ವಾರಕ್ಕೆ ಬಂಧನ ತಡೆ ನೀಡಿ ಕೋರ್ಟು ಇಂದು ಆದೇಶ ಹೊರಡಿಸಿದೆ.












