ಸನ್ಮಾರ್ಗ ವಾರ್ತೆ
ನಾರ್ತ್ ಕರೊಲಿನ: ಮಧ್ಯ ರಾತ್ರಿಯಲ್ಲಿ ಮನೆಗೆ ನುಗ್ಗಿದ ದರೋಡೆಕೋರನನ್ನು ಹನ್ನೆರಡು ವರ್ಷದ ಬಾಲಕ ಗುಂಡಿಟ್ಟು ಕೊಲೆ ಮಾಡಿರುವ ಘಟನೆ ಅಮೆರಿಕದ ನಾತಕರೊಲಿನದ ಸೌತ್ ವಿಲಿಯಂ ಸ್ಟ್ರೀಟಿನಲ್ಲಿ ಘಟನೆ ನಡೆದಿದೆ.
ಮನೆಗೆ ನುಗ್ಗಿದ ಇಬ್ಬರು ಹಣ ಕೇಳಿದ್ದಾರೆ. ಬಾಲಕನ ಅಜ್ಜಿ ಎಲ್ಲಿಸ್(78)ಗೆ ಗುಂಡು ಹಾರಿಸಿದ್ದಾರೆ. ಇದನ್ನು ನೋಡಿದ ಬಾಲಕ ಮನೆಯೊಳಗಿದ್ದ ರಿವಾಲ್ವರ್ ತೆಗೆದು ಕೊಂಡು ಬಂದು ದರೋಡೆಕೋರರ ಮೇಲೆ ಗುಂಡು ಹಾರಿಸಿದ್ದಾನೆ.
ಇಬ್ಬರು ದರೋಡೆಕೋರರಿಗೂ ಗುಂಡು ಏಟು ತಗಲಿತ್ತು. ಆದರೆ ಅಲ್ಲಿಂದ ಇಬ್ಬರೂ ಓಡಿ ಪರಾರಿಯಾಗಿದ್ದಾರೆ. ನಂತರ ಬಂದ ಪೊಲೀಸರು ಪರಿಸರದಲ್ಲಿ ಹುಡುಕಾಡಿದಾಗ ಒಬ್ಬ ವ್ಯಕ್ತಿ ಗುಂಡೇಟಿಗೊಳಗಾಗಿದ್ದು ಕಂಡು ಬಂದಿದೆ. ಪೊಲೀಸರು ಕೂಡಲೇ ಅವನನ್ನು ಆಸ್ಪತ್ರೆಗೆ ಸಾಗಿಸಿದರೂ ಜೀವ ಉಳಿಸಲು ಸಾಧ್ಯವಾಗಿಲ್ಲ. ಕಾಲಿಗೆ ಗುಂಡೇಟಾಗಿರುವ ಬಾಲಕನ ಅಜ್ಜಿ ಎಲ್ಲಿಸ್ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಇನ್ನೊಬ್ಬ ಆರೋಪಿಯನ್ನು ಪೊಲೀಸರು ಹುಡುಕುತ್ತಿದ್ದಾರೆ. ಬಾಲಕನ ವಿವರವನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಆತ್ಮ ರಕ್ಷಣೆಗಾಗಿ ಬಾಲಕ ಈ ಧೈರ್ಯ ತೋರಿದ್ದಾನೆ ಎಂದು ತಿಳಿಸಿದ್ದಾರೆ.












