ತಮಿಳ್ನಾಡಿನಲ್ಲಿ ದೇವಾಲಯದ ಆನೆಗೆ ಹಿಂಸೆ ನೀಡಿದ ವೀಡಿಯೋ ವೈರಲ್: ಇಬ್ಬರನ್ನು ಬಂಧಿಸಿದ ಅರಣ್ಯ ಇಲಾಖೆ

0
784

ಸನ್ಮಾರ್ಗ ವಾರ್ತೆ

ತಮಿಳುನಾಡು: ತಮಿಳುನಾಡಿನ ಮೆಟ್ಟುಪಾಳಯಂನ ತೆಪ್ಪಕಾಡುನಲ್ಲಿರುವ ದೇವಾಲಯದ ಆನೆಗಳ ನವ ಯೌವ್ವನ ಪಡೆಯುವ ಶಿಬಿರದಲ್ಲಿ ಆನೆಗೆ ಹಿಂಸೆ ನೀಡಿದ ವೀಡಿಯೋವೊಂದು ಸದ್ಯ ವೈರಲ್ ಆಗಿದ್ದು, ಘಟನೆಯ ಸಂಬಂಧ ಇಬ್ಬರು ಆರೋಪಿಗಳನ್ನು ಕೊಯಂಬತ್ತೂರು ಅರಣ್ಯ ಇಲಾಖೆ ಬಂಧಿಸಿರುವ ಬಗ್ಗೆ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮೆಟ್ಟುಪಾಳಯಂನ ತೆಪ್ಪಕಾಡುನಲ್ಲಿರುವ ಆನೆಗಳಿಗೆ ನವ ಯೌವನ ಪಡೆಯುವ ಶಿಬಿರವನ್ನು ಆಯೋಜಿಸಲಾಗಿತ್ತು. ಇಲ್ಲಿ ದೇವಾಲಯದ ಆನೆಯೊಂದಕ್ಕೆ ಹಿಂಸೆ ನೀಡಿರುವ ವೀಡಿಯೋ ವೈರಲ್ ಆಗಿದ್ದು, ಘಟನೆಯ ಬಳಿಕ ಮಾಹಿತಿ ಪಡೆದು ಆನೆಯನ್ನು ಹೊಡೆದಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಕೊಯಮತ್ತೂರು ಅರಣ್ಯ ಇಲಾಖೆ ತಿಳಿಸಿದೆ.

ಆನೆಯನ್ನು ಮರವೊಂದಕ್ಕೆ ಕಟ್ಟಿಹಾಕಿ, ಇಬ್ಬರು ಆರೋಪಿಗಳು ಹಿಂಸೆ ನೀಡಿದ್ದನ್ನು ಸ್ಥಳೀಯರೋರ್ವರು ವೀಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ, ಕ್ರಮಕ್ಕೆ ಆಗ್ರಹಿಸಿದ್ದರು‌‌. ವೀಡಿಯೋ ವೈರಲ್ ಆದ ಬಳಿಕ ವನ್ಯಜೀವಿ ಕಾರ್ಯಕರ್ತರು ಈ ಹಿಂಸೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿನ ವರದಿಯ ಪ್ರಕಾರ, ಮಹೌತ್ ಮತ್ತು ಆತನ ಸಹಾಯಕನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಇವರನ್ನು ಬಂಧಿಸಿರುವುದಾಗಿ ತಿಳಿದು ಬಂದಿದೆ.

ಫೆಬ್ರವರಿ 8 ರಂದು ಸುಮಾರು ಎರಡು ತಿಂಗಳ ಸುದೀರ್ಘ ನವ ಯೌವನ ಪಡೆಯುವ ಶಿಬಿರಕ್ಕಾಗಿ ತಮಿಳುನಾಡು ಮತ್ತು ಪುದುಚೇರಿಯ ವಿವಿಧ ದೇವಾಲಯಗಳು ಮತ್ತು ಮಠಗಳಿಂದ 26 ಆನೆಗಳನ್ನು ಕೊಯಮತ್ತೂರು ಜಿಲ್ಲೆಯ ತೆಕಂಪಟ್ಟಿಗೆ ಕರೆತರಲಾಗಿತ್ತು‌‌.

ಮಾಸಿನಗುಡಿ ಎಂಬಲ್ಲಿ ಕೆಲವು ಗ್ರಾಮಸ್ಥರು ಆನೆಯನ್ನು ಓಡಿಸಲು ಟೈರ್ ತುಂಡನ್ನು ಎಸೆದಿದ್ದು, ಬಳಿಕ ಆನೆ ಮೃತಪಟ್ಟ ಕೆಲವು ದಿನಗಳ ನಂತರ ಈ ಘಟನೆ ಸಂಭವಿಸಿದೆ.
ಕಳೆದ ಜನವರಿ 19 ರಂದು ವೈದ್ಯಕೀಯ ಚಿಕಿತ್ಸೆಗಾಗಿ ಶಿಬಿರಕ್ಕೆ ಸಾಗಿಸುವಾಗ ಆನೆ ಮೃತಪಟ್ಟಿದೆ. ಆನೆಗೆ ಬೆಂಕಿ ಹಚ್ಚಲು ಕಾರಣವೆಂದು ಹೇಳಲಾದ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕಳೆದ ವಾರ, ಮದ್ರಾಸ್ ಹೈಕೋರ್ಟ್ ಆನೆಗಳ ಸಾವಿಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ಕೇಂದ್ರ ತನಿಖಾ ದಳದಿಂದ ತನಿಖೆ ಮಾಡಬೇಕು ಎಂದು ಆದೇಶಿಸಿತ್ತು. ಆನೆಗಳು ಪರಿಸರ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದು, ಆನೆಗಳ ಸಾವಿನ ಸಂಖ್ಯೆಯನ್ನು ನಿಗ್ರಹಿಸಲು ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ವೀಡಿಯೋ: