ಸನ್ಮಾರ್ಗ ವಾರ್ತೆ
ಅರೆಹಳ್ಳಿ: ಜಮಾಅತೆ ಇಸ್ಲಾಮೀ ಹಿಂದ್ ಹ್ಯುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿಯ ವತಿಯಿಂದ ದಿನಾಂಕ 19, 20 ಮತ್ತು 21 ಫೆಬ್ರವರಿ 2021ರಂದು ಅರೇಹಳ್ಳಿಯಲ್ಲಿ ಹಾಸನ ಮತ್ತು ಮೈಸೂರು ವಲಯದ ಸದಸ್ಯರಿಗಾಗಿ ಮೊದಲನೇ ಹಂತದ ಮೂರು ದಿನಗಳ ವಿಪತ್ತು ನಿರ್ವಹಣಾ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಈ ಶಿಬಿರದಲ್ಲಿ ಹಾಸನ, ಅರೇಹಳ್ಳಿ, ಚಿಕ್ಕಮಗಳೂರು, ತರೀಕೆರೆ, ತಿಪಟೂರು, ತುಮಕೂರು, ಹುಣಸೂರು, ಮೈಸೂರು, ಮುಂತಾದ ಸ್ಥಳಗಳಿಂದ 30 ಸದಸ್ಯರು ಪಾಲ್ಗೊಂಡಿದ್ದರು. ಈ ಮೂರು ದಿನದ ಶಿಬಿರದಲ್ಲಿ ಭಾಗವಹಿಸಿದವರಿಗೆ ನುರಿತ ತರಬೇತುದಾರರಾದ ಅಮೀರ್ ಸಿದ್ದೀಕ್, ಮುನೀರ್ ಪದ್ರೆಂಗಿ, ಅಬ್ರಾರ್ ಅಹ್ಮದ್ ಅರೇಹಳ್ಳಿ ಮತ್ತು ಅಮೀರ್ ಜಾನ್ ತೀರ್ಥಹಳ್ಳಿರವರ ನೇತೃತ್ವದಲ್ಲಿ ಎಕ್ಯೋಪ್ಮೆಂಟ್ಸ್, ನಾಟ್ಸ್, ರೊಪ್/ಲ್ಯಾಡರ್ ಕ್ಲೈಂಬಿಂಗ್, ರಾಕ್ ಕ್ಲೈಂಬಿಂಗ್, ರ್ಯಾಪ್ಲಿಂಗ್ ಇತರ ವಿಷಯದಲ್ಲಿ ತರಬೇತಿ ನೀಡಲಾಯಿತು.
ಈ ಸಂದರ್ಭದಲ್ಲಿ ಅರೇಹಳ್ಳಿಯ ಮುಖ್ಯ ರಸ್ತೆಯಲ್ಲಿರುವ ಇಕ್ರಅ್ ಮಸೀದಿಯ ಆವರಣದಲ್ಲಿ ಪ್ರಥಮ ಚಿಕಿತ್ಸಾ ಕಾರ್ಯಾಗಾರವು ನಡೆಯಿತು.













