ಮಧ್ಯಪ್ರಾಚ್ಯದ ಸಮುದ್ರ ತೀರದಲ್ಲಿ ಇಸ್ರೇಲಿನ ಸರಕು ಹಡಗು ಸ್ಫೋಟ

0
584

ಸನ್ಮಾರ್ಗ ವಾರ್ತೆ

ದುಬೈ: ಅಮೆರಿಕ ಮತ್ತು ಇರಾನ್ ಪರಸ್ಪರ ನಿಲುವು ಬಿಗಿಗೊಳಿಸುತ್ತಿದ್ದು ಇದೇ ವೇಳೆ ಮಧ್ಯಪ್ರಾಚ್ಯದ ಸಮುದ್ರ ತೀರದಲ್ಲಿ ಇಸ್ರೇಲಿನ ಸರಕು ಹಡಗು ಸ್ಫೋಟವಾಗಿದೆ. ಹಡಗಿನ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ ಎಂದು ನೌಕಾ ಸೇನೆಯ ಮೂಲಗಳು ತಿಳಿಸಿದ್ದಾರೆ. ಸ್ಫೋಟದ ನಂತರ ಅತ್ಯಂತ ಹತ್ತಿರದ ಬಂದರಿಗೆ ಹಡಗನ್ನು ತಂದು ನಿಲ್ಲಿಸಲಾಗಿದೆ ಎಂದು ವರದಿಯಾಗಿದೆ.

ಎಂವಿ ಹೆಲಿಯಸ್ ರೆ ಎಂಬ ಹಡಗಿನಲ್ಲಿ ಸ್ಫೋಟ ಆಗಿದೆ ಎಂದು ಸಮುದ್ರ ಗುಪ್ತಚಾರ ವಿಭಾಗ ವರದಿ ನೀಡಿದೆ. ಸೌದಿ ಅರೇಬಿಯದ ದಮ್ಮಾನಿಂದ ಹೊರಟ ಹಡಗು ಹಠಾತ್ತಾಗಿ ದಿಕ್ಕು ಬದಲಿಸಿತು. ಸ್ಫೋಟದ ಕಾರಣ ಸ್ಪಷ್ಟವಾಗಿಲ್ಲ. ಇರಾನ್ ಸೇನೆಯ ಪಾತ್ರ ಇದರಲ್ಲಿದೆಯೇ ಎಂದು ತನಿಖೆ ಮಾಡಲಾಗುವುದು ಎಂದು ಬಹ್ರೈನ್ ಅಮೆರಿಕ ನೌಕಸೇನೆಯ ಮೂಲಗಳು ಹೇಳಿವೆ.
ಸ್ಫೋಟದ ವಿವರ ಸ್ಪಷ್ಟವಾಗದಿದದ್ದರೂ ಇಬ್ಬರು ಅಮೆರಿಕದ ರಕ್ಷಣಾ ಅಧಿಕಾರಿಗಳು ಹಡಗಿನ ದ್ವಾರಗಳನ್ನು ಕಂಡು ಹುಡುಕಿದ್ದಾರೆ. ಟೆಲ್ ಅವಿವ್‍ನ ರೆ ಶಿಪ್ಪಿಂಗ್ ಲಿಮಿಟೆಡ್ ಕಂಪನಿಗೆ ಸೇರಿದ ಹಡಗು ಇದು.