ಕಣ್ಣೂರಿನಲ್ಲಿ ಸ್ಟೀಲ್ ಬಾಂಬ್ ಪತ್ತೆ

0
615

ಸನ್ಮಾರ್ಗ ವಾರ್ತೆ

ಕೇರಳ: ತಲಶ್ಶೇರಿ ಪೊಲೀಸರು ಮತ್ತು ಬಾಂಬ್‍ ಸ್ಕ್ವಾಡ್ ಜಂಟಿಯಾಗಿ ನಡೆಸಿದ ಆಯುಧ ತಪಾಸಣೆಯಲ್ಲಿ ಸ್ಟೀಲ್ ಬಾಂಬ್ ಪತ್ತೆಯಾಗಿದೆ. ತಲಶ್ಶೇರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಉಕಂಡನ್ ಪೀಡಿಗ ಸಮೀಪ ಪಿ.ಪಿ.ಅನಂತನ್ ರಸ್ತೆಯಲ್ಲಿ ಅಯ್ಯತ್ತಾನ್ ಎಂಬಲ್ಲಿ ಸ್ಟೀಲ್ ಬಾಂಬ್ ಪತ್ತೆಯಾಗಿದೆ.

ಬಾಂಬು ತಯಾರಿಸಲು ಬಳಸುವ 13 ಸ್ಟೀಲ್ ಕಂಟೈನರ್, ಸಿಡಿಮದ್ದು ಮುಂತಾದುವು ಪತ್ತೆಯಾಗಿದೆ . ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿರುವುದಾಗಿ ಪೊಲೀಸರು ಹೇಳಿದರು.ತಲಶ್ಶೇರಿ ಇನ್ಸ್‌ಪೆಕ್ಟರ್ ಗೋಪಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಸಬ್‌ಇನ್ಸ್‌ಪೆಕ್ಟರ್ ಆಶ್ರಫ್, ಬಾಂಬು ಪತ್ತೆ ದಳದ ಸದಸ್ಯರು ಆಯುಧ ತಪಾಸಣೆಯಲ್ಲಿ ಭಾಗವಹಿಸಿದರು.