ಬೆಲೆ ಏರಿಕೆಯ ವಿರುದ್ದ ಧ್ವನಿ ಎತ್ತಿರಿ: ಸಾಮಾಜಿಕ ಮಾಧ್ಯಮಗಳಲ್ಲಿ ಕಾಂಗ್ರೆಸ್ ಅಭಿಯಾನ

0
405

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಬೆಲೆಯೇರಿಕೆಯ ವಿರುದ್ಧ ಕಾಂಗ್ರೆಸ್ ನೇತೃತ್ವದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹ್ಯಾಶ್ ಟ್ಯಾಗ್ ಅಭಿಯಾನ ಆರಂಭವಾಗಿದೆ. ಬೆಲೆಯೇರಿಕೆ ವಿರುದ್ಧ ಧ್ವನಿ ಎತ್ತಿರಿ (ಸ್ಪೀಕ್ ಅಪ್ ಎಗೈನ್ಸ್ಟ್ ಪ್ರೈಸ್ ರೈಸ್) ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಮಾಡಲಾಗಿದೆ.

ದೇಶದಲ್ಲಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಆಹಾರವಸ್ತುಗಳ ಬೆಲೆ ಗಗನಕ್ಕೆ ಏರುತ್ತಿರುವುದನ್ನು ಕಾಂಗ್ರೆಸ್ ಪ್ರತಿಭಟಿಸಿದೆ. ಪ್ರತಿಭಟನೆಯನ್ನು ಬೆಂಬಲಿಸಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸಚಿನ್ ಪೈಲಟ್, ಶಶಿ ತರೂರ್ ರಂಗ ಪ್ರವೇಶಿಸಿದ್ದಾರೆ. ಇಂಧನ ಬೆಲೆ ಹೆಚ್ಚಳ ಸರಕಾರದ ವರಮಾನದ ದಾರಿಯಾಗಿ ಮಾಡಿಕೊಂಡಿದೆ ರಾಹುಲ್ ಗಾಂಧಿ ಟೀಕಿಸಿದರು.

ಜನಸಾಮಾನ್ಯರ ಸಮಸ್ಯೆಗಳನ್ನು ಕಡೆಗಣಿಸಿ ಬೆಲೆ ಏರಿಕೆಯನ್ನು ಕೇಂದ್ರ ಸರಕಾರ ಸಮರ್ಥಿಸಿಕೊಳ್ಳುತ್ತಿದೆ. ಹಣದುಬ್ಬರ ಹೆಚ್ಚಳಕ್ಕೆ ಕೇಂದ್ರ ಹಲವು ಕಾರಣಗಳನ್ನು ತಂದಿಡುತ್ತಿವೆ. ಚಳಿಗಾಲ, ಹಿಂದಿನ ಸರಕಾರದ ನೀತಿಗಳು, ಜನರು ಹೆಚ್ಚು ಪ್ರಯಾಣಿಸದ್ದರಿಂದ ಟಿಕೆಟ್ ಚಾರ್ಜು ಹೆಚ್ಚಳ ಇವೆಲ್ಲವನ್ನು ಹೇಳುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.

ದೇಶದಲ್ಲಿ ಪೆಟ್ರೋಲ್ ಡೀಸೆಲ್ ದರ, ಅಡುಗೆ ಅನಿಲ ದರ ದಿನಾಲೂ ಹೆಚ್ಚಳವಾಗುತ್ತಿದೆ ದೇಶದ ವಿವಿಧ ಭಾಗಗಳಲ್ಲಿ ಪೆಟ್ರೋಲ್ ಬೆಲೆ ನೂರು ರೂಪಾಯಿ ದಾಟಿದೆ ಇದರ ವಿರುದ್ಧ ದೇಶದ ವಿವಿಧ ಕಡೆಗಳಲ್ಲಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿದೆ.