ಸಂಸತ್ ನ ಬಜೆಟ್ ಅಧಿವೇಶನಕ್ಕೆ ಪ್ರತಿಪಕ್ಷದ ನಾಯಕರಾಗಿ ರಾವ್ನೀತ್ ಸಿಂಗ್ ಬಿಟ್ಟು ನೇಮಕ

0
558

ಸನ್ಮಾರ್ಗ ವಾರ್ತೆ

ನವದೆಹಲಿ: ಪ್ರಸಕ್ತ ನಡೆಯುತ್ತಿರುವ ಸಂಸತ್ತಿನ ಬಜೆಟ್ ಅಧಿವೇಶನಕ್ಕೆ ಅಧೀರ್ ರಂಜನ್ ಚೌಧರಿ ಅವರ ಸ್ಥಾನಕ್ಕೆ ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕರನ್ನಾಗಿ ಕಾಂಗ್ರೆಸ್ ಮುಖಂಡ ರಾವ್ನೀತ್ ಸಿಂಗ್ ಬಿಟ್ಟು ಅವರನ್ನು ಗುರುವಾರ ನೇಮಕ ಮಾಡಲಾಗಿದೆ. ಕಾಂಗ್ರೆಸ್ ನ ಬಂಗಾಳ ಘಟಕದ ಮುಖ್ಯಸ್ಥರಾದ ಚೌಧರಿ ಅವರನ್ನು ಮುಂದಿನ ಎರಡು ತಿಂಗಳು ಚುನಾವಣಾ ಪ್ರಚಾರಕ್ಕಾಗಿ ನೇಮಿಸಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.

1995 ರಲ್ಲಿ ಹತ್ಯೆಗೀಡಾದ ಪಂಜಾಬ್ ನ ಮಾಜಿ ಮುಖ್ಯಮಂತ್ರಿ ಬೀಯಾಂತ್ ಸಿಂಗ್ ಅವರ ಮೊಮ್ಮಗನಾಗಿರುವ ರಾವ್ನೀತ್ ಸಿಂಗ್ ಬಿಟ್ಟು ಅವರನ್ನು ಲೋಕಸಭೆಯಲ್ಲಿ ಕಾಂಗ್ರೆಸ್ ನ ವಿಪ್ ಆಗಿ ಕಳೆದ ಆಗಸ್ಟ್ ನಲ್ಲಿ ನೇಮಿಸಲಾಗಿತ್ತು.

ಮೂರು ಬಾರಿ ಸಂಸದರಾಗಿರುವ ಲೋಕಸಭೆಯ ಕಾಂಗ್ರೆಸ್ ಉಪನಾಯಕ ಗೌರವ್ ಗೊಗೊಯ್ ಕೂಡ ಅಸ್ಸಾಂನಲ್ಲಿ ನಡೆಯುವ ಚುನಾವಣೆಯ ಕೆಲಸ ಕಾರ್ಯದಲ್ಲಿ ನಿರತರಾಗಿದ್ದಾರೆ.