ಟಿಆರ್‌ಪಿ ವಂಚನೆ: ಟಿವಿ ಚ್ಯಾನೆಲ್‍ಗಳಿಂದ 32ಕೋಟಿ ರೂ. ಮೌಲ್ಯದ ಆಸ್ತಿ ವಶಪಡಿಸಿಕೊಂಡ ಇಡಿ

0
1223

ಸನ್ಮಾರ್ಗ ವಾರ್ತೆ

ಮುಂಬೈ: ಟಿವಿ ಚ್ಯಾನಲ್‍ಗಳ ರೇಟಿಂಗ್ ವಂಚನೆ ಪ್ರಕರಣದಲ್ಲಿ ಕಪ್ಪುಹಣ ಬಿಳಿ ಮಾಡಿದ ಕುರಿತ ತನಿಖೆಯನ್ನು ಎನ್ಪೋರ್ಸ್‍ಮೆಂಟ್ ಡೈರೆಕ್ಟರೇಟ್ ಮಾಡುತ್ತಿದ್ದು ಮಹಾರಾಷ್ಟ್ರದ ಟಿವಿ ಚ್ಯಾನೆಲ್‍ಗಳಿಂದ 32 ಕೋಟಿ ರೂ. ಆಸ್ತಿಯನ್ನು ವಶಕ್ಕೆ ಪಡೆದಿದೆ. ಫಕ್ತಿ ಮರಾಠಿ, ಬೊಕ್ಸಿ ಸಿನೆಮಾ, ಮಹಾ ಮೂವಿಗಳ ಜಮೀನು, ವಾಣಿಜ್ಯ, ವಾಸ್ತವ್ಯ ಕಟ್ಟಡಗಳನ್ನು ತನಿಖಾ ತಂಡ ವಶಕ್ಕೆ ಪಡೆದುಕೊಂಡಿದ್ದು ಮುಂಬೈ, ಇಂದೋರ್, ದಿಲ್ಲಿ, ಗುಡ್‍ಗಾವ್‍ಗಳಲ್ಲಿರುವ ಆಸ್ತಿ, ಬ್ಯಾಂಕ್ ಠೇವಣಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತನಿಖಾ ತಂಡ ಹೇಳಿದೆ.

ಟಿವಿ ರೇಟಿಂಗ್ ಪಾಯಿಂಟ್ ಟಿಆರ್‌ಪಿ ವಂಚನೆಗೆ ಸಂಬಂಧಿಸಿ ಮುಂಬೈ ಪೊಲೀಸರ ಕೇಸನ್ನು ಅಧ್ಯಯನ ಮಾಡಿ ಚ್ಯಾನೆಲ್‍ಗಳ ಮೇಲೆ ಇಡಿ ಕಪ್ಪು ಹಣ ಬಿಳಿ ಮಾಡಿದ ಕೇಸು ದಾಖಲಿಸಿಕೊಂಡಿತ್ತು. ಚ್ಯಾನೆಲ್‍ಗಳಲ್ಲಿ ಸುಮಾರು 46.77 ಕೋಟಿ ರೂ. ಮೌಲ್ಯದ ವಂಚನೆ ನಡೆದಿದೆ ಎಂದು ಇಡಿ ಆರೋಪಿಸಿದೆ.