ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಜಾಮೀನು ಸಿಗಬೇಕಾದರೆ ಸಂತ್ರಸ್ತ ಮಹಿಳೆಯ ಕೈಗೆ ರಾಖಿ ಕಟ್ಟಬೇಕೆಂದು ಮಧ್ಯಪ್ರದೇಶ ಹೈಕೋರ್ಟು ನೀಡಿದ ವಿವಾದ ತೀರ್ಪನ್ನು ಸುಪ್ರೀಂಕೋರ್ಟು ರದ್ದುಪಡಿಸಿದೆ.
ಮಹಿಳಾ ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿಯಲ್ಲಿ ಸುಪ್ರೀಂಕೋರ್ಟು ಮಧ್ಯಪ್ರವೇಶಿಸಿ ಇಂತಹ ಆದೇಶಗಳು ಪುನರಾವರ್ತನೆಗೆ ಅವಕಾಶವಾಗಬಹುದೆಂದು ಕೋರ್ಟು ನಿರೀಕ್ಷಿಸಿದೆ.
ಬಾಲಕಿ ಅನುಭವಿಸಿದ ಮಾನಸಿಕ ಹಿಂಸೆಯನ್ನು ಪರಿಗಣಿಸಬೇಕೆಂದು ಮಹಿಳಾ ವಕೀಲೆ ಆಗ್ರಹಿಸಿದ್ದು ಅದನ್ನು ಕೋರ್ಟು ಅಂಗೀಕರಿಸಿತು. ಪ್ರಕರಣದಲ್ಲಿ ಆರೋಪಿಗೆ ನೀಡಲಾದ ನಡವಳಿಕೆಗಳನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು.
2020 ಎಪ್ರಿಲ್ನಲ್ಲಿ ನೆರೆಮನೆಯ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಉಜ್ಜೈನಿಯ ವಿಕ್ರಮ್ ಬಗಾರಿಯ ಎಂಬಾತನನ್ನು ಬಂಧಿಸಲಾಗಿತ್ತು. ನಂತರ ಈತ ಮಧ್ಯಪ್ರದೇಶ ಹೈಕೋರ್ಟಿನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದನು. ಜಾಮೀನು ಸಿಗಬೇಕಾದರೆ ಹೈಕೋರ್ಟಿನ ಇಂದೋರ್ ಪೀಠವು ಸಂತ್ರಸ್ತೆಗೆ ರಾಖಿ ಕಟ್ಟಬೇಕೆಂದು ಹೇಳಿತ್ತು. ಈ ನಿಬಂಧನೆಯ ವಿರುದ್ಧ ಮಹಿಳಾ ವಕೀಲೆ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿ ಪ್ರಶ್ನಿಸಿದ್ದರು.
ಇದಲ್ಲದೆ ಮಹಿಳೆಯ ಸಹೋದರನಿಗೆ 11,000 ರೂಪಾಯಿ ಮತ್ತು ಮಗನಿಗೆ ಬಟ್ಟೆಬರೆ ಹಾಗೂ ಫಲಾಹಾರವನ್ನು ಖರೀದಿಸಲು 5000ರೂಪಾಯಿ ಕೊಡಬೇಕೆಂದು ಕೋರ್ಟು ಆದೇಶ ನೀಡಿತ್ತು. ಅಕ್ಟೋಬರ್ 16ಕ್ಕೆ ಮಧ್ಯಪ್ರದೇಶ ಹೈಕೋರ್ಟಿನ ಈ ತೀರ್ಪಿಗೆ ಸುಪ್ರೀಂಕೋರ್ಟು ತಡೆಯಾಜ್ಞೆ ನೀಡಿತ್ತು.












