ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಪಾಕಿಸ್ತಾನ ವಿರೋಧಿ ಘೋಷಣೆ ಕೂಗುವಂತೆ ಹೇಳಿ ದಿಲ್ಲಿಯ ಕಜೌರಿ ಖಾಸ್ ಎಂಬಲ್ಲಿ ಯುವಕನೊಬ್ಬನ ಮೇಲೆ ತೀವ್ರಾಗಿ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಯುವಕನಿಗೆ ಹೊಡೆದ ನಂತರ ಹಿಂದೂಸ್ಥಾನ್ ಝಿಂದಾಬಾದ್, ಪಾಕಿಸ್ತಾನ್ ಮುರ್ದಾಬಾದ್ ಎಂದು ಕೂಗಲು ಹೇಳುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರವಾಗಿದೆ. ವೀಡಿಯೊದ ಆಧಾರದಲ್ಲಿ ಪೊಲೀಸರು ದುಷ್ಕರ್ಮಿಗಳ ಮೇಲೆ ದೂರು ದಾಖಲಿಸಿಕೊಂಡಿದ್ದಾರೆ.
ರಸ್ತೆಯ ಬದಿಯಲ್ಲಿ ಮಲಗಿದ್ದ ವ್ಯಕ್ತಿಗೆ ಹೊಡೆದು ಪಾಕಿಸ್ತಾನ ಮುರ್ದಾಬಾದ್ ಘೋಷಣೆ ಕೂಗುವಂತೆ ಹೇಳುವುದು ವೀಡಿಯೊದಲ್ಲಿದೆ. ಇನ್ನೊಬ್ಬ ಯುವಕ ಶರ್ಟಿನ ಕಾಲರ್ ಹಿಡಿದು ಘೋಷಣೆ ಬೊಬ್ಬೆಹೊಡೆದು ಕೂಗುವಂತೆ ಹೇಳುತ್ತಿದ್ದಾನೆ. ಈತ ದೃಶ್ಯದಲ್ಲಿ ಕಾಣುವುದಿಲ್ಲ. ಹೊಡೆಯಬೇಡಿ ಎಂದು ಯುವಕ ಹೇಳಿದರೂ ಶರ್ಟಿ ಹಿಡಿದು ನೆಲೆಕ್ಕೆ ಕೆಡವಿ ಎಳೆದಾಡುವುದು ವೀಡಿಯೊದಲ್ಲಿದೆ.
ಇದೇ ವೇಳೆ ಘಟನೆಯಲ್ಲಿ ಮುಖ್ಯ ಆರೋಪಿಯನ್ನು ಬಂಧಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ಕಜೌರಿ ಖಾಸ್ನಲ್ಲಿ ನಡೆದ ಘಟನೆ ಕ್ರಿಮಿನಲ್ ಅಪರಾಧ ತನಿಖೆಯ ಭಾಗವಾಗಿ ಒಬ್ಬನನ್ನು ಬಂಧಿಸಿದ್ದೆವೆಂದು ಪೊಲೀಸರು ಟ್ವೀಟ್ ಮಾಡಿದ್ದಾರೆ.












