ಸನ್ಮಾರ್ಗ ವಾರ್ತೆ
ಚೆನ್ನೈ: ಪುದುಚೇರಿ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಬಿಜೆಪಿ ಆಧಾರ್ ವಿವರಗಳನ್ನು ಸೋರಿಕೆ ಮಾಡಿದೆ ಎಂಬ ಆರೋಪ ಕೇಳಿಬಂದಿದ್ದು ವ್ಯಕ್ತಿಗಳ ವಿವರಗಳನ್ನು ಸೋರಿಕೆ ಮಾಡಿ ವಾಟ್ಸಪ್ ನಂಬರ್ ಸಂಗ್ರಹಿಸಿ ಪ್ರಚಾರ ಸಂದೇಶಗಳನ್ನು ಕಳುಹಿಸುತ್ತಿದೆ ಎಂದು ಮದ್ರಾಸ್ ಹೈಕೋರ್ಟಿನಲ್ಲಿ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಲಾಗಿದೆ.
ಘಟನೆಯಲ್ಲಿ ವಿವರವಾದ ತನಿಖೆ ನಡೆಸಿ ಎರಡು ದಿವಸಗಳೊಳಗೆ ವರದಿ ನೀಡಬೇಕೆಂದು ಮದ್ರಾಸ್ ಹೈಕೋರ್ಟು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ. ಇದು ಗಂಭೀರ ಅಪರಾಧ ಎಂದ ಕೋರ್ಟು ಚುನಾವಣಾ ಆಯೋಗ ತನಿಖೆಯನ್ನು ಸೈಬರ್ ಸೆಲ್‍ಗೆ ವಹಿಸಿಕೊಟ್ಟು ಕೈತೊಳೆದುಕೊಳ್ಳಲು ಸಾಧ್ಯವಿಲ್ಲ ಎಂದು ಕೋರ್ಟು ಹೇಳಿದೆ.
ಪುದುಚೇರಿ ಡಿವೈಎಫ್‍ಐ ಯುನಿಟ್ ಅಧ್ಯಕ್ಷ ಆನಂದ್ ಎಂಬವರು ಮದ್ರಾಸ್ ಹೈಕೋರ್ಟಿನಲ್ಲಿ ಅರ್ಜಿಸಲ್ಲಿಸಿದ್ದಾರೆ. ಸ್ಥಳೀಯ ಬಿಜೆಪಿ ನಾಯಕರು ಆಧಾರ್‍ನಿಂದ ಫೋನ್ ನಂಬರ್ ಸಂಗ್ರಹಿಸಿ ನಂತರ ಬೂತ್ ಲೆವೆಲ್ ವಾಟ್ಸಪ್ ಗ್ರೂಪ್‍ಗಳನ್ನು ಮಾಡಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಈ ರೀತಿ ಬಿಜೆಪಿ ಪ್ರಚಾರ ಮಾಡುತ್ತಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ವಾಟ್ಸಪ್ ಗ್ರೂಪ್‍ಗಳ ಅಡ್ಮಿನ್‌ಗಳೊಂದಿಗೆ ಸಂಪರ್ಕಿಸಲು ಶ್ರಮಿಸಿದಾಗ ಬಿಜೆಪಿ ಪುದುಚೇರಿ ಯುನಿಟ್‍ನ ಅಡಿಯಲ್ಲಿ 953 ವಾಟ್ಸಪ್ ಗ್ರೂಪ್‍ಗಳೆಂದು ತಿಳಿದು ಬಂತು ಎಂದು ದೂರಿನಲ್ಲಿ ತಿಳಿಸಲಾಗಿದೆ. ವಾಟ್ಸಪ್ ಅಲ್ಲದೆ ಬಿಜೆಪಿ ನಾಯಕರು ಮತದಾರರಿಗೆ ಫೋನ್ ಕರೆ ಮಾಡುತ್ತಿದ್ದಾರೆ. ಹೆಸರು, ಮತದಾನದ ಮತಗಟ್ಟೆ, ಕ್ಷೇತ್ರದ ವಿವರಗಳನ್ನು ಫೋನ್ ಮಾಡಿ ಕೇಳಿದ್ದಾರೆ. ಘಟನೆಯಲ್ಲಿ ತನಿಖೆ ಮಾಡಬೇಕು. ಬಿಜೆಪಿ ಅಭ್ಯರ್ಥಿ ಇಂತಹ ಮತಯಾಚನೆಯನ್ನು ಮಾಡುತ್ತಿದ್ದು ಇದನ್ನು ತಡೆಯಬೇಕು ಎಂದು ಕೋರ್ಟನ್ನು ಅರ್ಜಿದಾರರು ಆಗ್ರಹಿಸಿದ್ದಾರೆ.












