ಮ್ಯಾನ್ಮಾರ್: ಸೇನಾ ದಾಳಿಗೆ ಹೆದರಿ ತಂದೆಯತ್ತ ಓಡಿದ ಏಳರ ಬಾಲೆಗೆ ಗುಂಡೇಟು; ‘ನೋವು ಸಹಿಸಲಾಗುತ್ತಿಲ್ಲ’ ಎಂದು ಅಸುನೀಗಿದ ಬಾಲಕಿ…

0
1587

ಸನ್ಮಾರ್ಗ ವಾರ್ತೆ

ಮಂಡಲಾಯ್(ಮ್ಯನ್ಮಾರ್): ಗುಂಡೇಟಿನಿಂದಾಗಿ ಏಳು ವರ್ಷದ ಬಾಲಕಿ ಚಡಪಡಿಸಿತ್ತಾ ತಂದೆಯ ಮಡಿಲಿನಲ್ಲಿ ಅಸುನೀಗಿದ್ದು, ನನಗೆ ನೋವನ್ನು ಸಹಿಸಲು ಆಗುತ್ತಿಲ್ಲ, ಅಷ್ಟು ನೋವಾಗುತ್ತಿದೆ ಎಂದು ಸಂದರ್ಭದಲ್ಲಿ ಮಗು ಹೇಳಿತು. ಕೂಡಲೇ ಏಳು ವರ್ಷದ ಖಿನ್ ಮ್ಹೋ ಚಿತ್ ಎಂಬ ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದರೂ ಅಷ್ಟರಲ್ಲಿಯೇ ಆ ಮಗು ಮೃತಪಟ್ಟಿತ್ತು.

ಹೃದಯಹೀನ ಮ್ಯನ್ಯಾರಿನ ಸೈನಿಕರು ಆ ಮುಗ್ಧ ಮಗುವಿನ ದೇಹಕ್ಕೂ ನಿಷ್ಠುರವಾಗಿ ಗುಂಡು ಹಾರಿಸಿದ್ದಾರೆ. ಮಂಡಲಾಯದ ಮನೆಯಲ್ಲಿ ಸೈನ್ಯ ತಪಾಸಣೆ ನಡೆಸುವ ವೇಳೆ ಹೆದರಿದ ಮ್ಹೋ ಚಿತ್ ತಂದೆಯ ಬಳಿಗೆ ಓಡಿ ಬಂದಿದ್ದಳು. ಆಗ ಸೈನಿಕರು ಆ ಮಗುವಿಗೂ ಗುಂಡು ಹಾರಿಸಿದರು.

ಮಂಗಳವಾರ ಸಂಜೆ ಸೇನೆ ಪ್ರದೇಶದಲ್ಲಿ ದಾಳಿ ನಡೆಸಿ ಮನೆಯಲ್ಲಿ ಆಯುಧಗಳನ್ನು ಅಡಗಿಸಿಡಲಾಗಿದೆಯೇ ಎಂದು ತಪಾಸಣೆ ನಡೆಸಿತ್ತು. ಪ್ರತಿಭಟನಾಕಾರರನ್ನು ಬಂಧಿಸಲು ಅವರು ಇಲ್ಲಿಗೂ ಬಂದಿದ್ದರು ಎಂದು ಚಿತ್‍ಳ ಹಿರಿಯ ಸಹೋದರಿ ಮೆ ತು ಸುಮಯ್ಯ ಹೇಳಿದರು. ಅವರು ಬಂದು ಮನೆಯ ಬಾಗಿಲನ್ನು ಒದ್ದು ತೆರೆದರು. ಬಾಗಿಲು ತೆಗೆದ ಕೂಡಲೇ ಒಳಗೆ ಯಾರಾದರೂ ಇದ್ದಾರಾ ಎಂದು ತಂದೆಯನ್ನು ಕೇಳಿದರು. ಇಲ್ಲ ಎಂದು ಹೇಳಿದರು. ಸುಳ್ಳು ಹೇಳುವೆ ಎಂದು ಅವರು ಒಳಗೆ ಬಂದು ಪರಿಶೀಲನೆಯಲ್ಲಿ ತೊಡಗಿದರು. ಇದರ ನಡುವೆ ಹೆದರಿದ ತಂಗಿ ತಂದೆಯ ಮಡಿಲಲ್ಲಿ ಕುಳಿತುಕೊಳ್ಳುವುದಕ್ಕಾಗಿ ಓಡಿದಳು. ಕೂಡಲೇ ಅವರು ಅವಳ ಮೇಲೆ ಗುಂಡು ಹಾರಿಸಿದರು ಎಂದು ಸುಮಯ್ಯ ಹೇಳಿದಳು.

ಮ್ಯಾನ್ಮಾರ್ ಮುಸ್ಲಿಂ ಮೀಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ಚಿತ್‍ಳ ಕೊನೆಯ ಕ್ಷಣಗಳನ್ನು ತಂದೆ ಉಮೊಂಗ್ ಕೊ ಹಾಶಿನ್ ಬಾಯ್ ಕಣ್ಣೀರಿಡುತ್ತಾ ವಿವರಿಸಿದರು. ನೋವಿನಿಂದ ಒದ್ದಾಡಿದ ನನ್ನ ಕಂದಮ್ಮಳಿಗೆ ಅದನ್ನು ಸಹಿಸಲು ಆಗುತ್ತಿರಲಿಲ್ಲ. ಅವಳನ್ನು ಕೂಡಲೇ ನಾವು ಒಂದು ಕಾರಿನಲ್ಲಿ ಆಸ್ಪತ್ರೆಗೆ ಕೊಂಡು ಹೋದೆವು. ಆದರೆ ಜೀವ ರಕ್ಷಿಸಲು ಆಗಲಿಲ್ಲ ಎಂದು ಹಾಶಿನ್ ಬಾಯ್ ಹೇಳಿದರು. ಹಾಶಿನ್ ಬಾಯ್‍ರ ಹತ್ತೊಂಬತ್ತು ವರ್ಷದ ಮಗನನ್ನು ಹೊಡೆದು ಬಂಧಿಸಿದ್ದಾರೆ. ಚಿತ್‍ಳ ಸಾವಿನ ಕುರಿತು ಸೇನೆ ಈವರೆಗೆ ಪ್ರತಿಕ್ರಿಯಿಸಿಲ್ಲ.

ಮ್ಯಾನ್ಮಾರಿನಲ್ಲಿ ಸೇನೆ ಆಡಳಿತ ಕಿತ್ತುಕೊಂಡ ಮೇಲೆ 20ಕ್ಕೂ ಹೆಚ್ಚು ಮಕ್ಕಳನ್ನು ಕೊಲ್ಲಲ್ಲಾಗಿದೆ ಎಂಬುದಾಗಿ ಸೇವ್ ದಿ ಚಿಲ್ಡ್ರನ್ ಗ್ರೂಪ್ ತಿಳಿಸಿದೆ. ಒಟ್ಟು 164 ಮಂದಿಯನ್ನು ಸೇನೆಯು ಹತ್ಯೆಗೈದಿದೆ. ಪ್ರತಿಭಟನಾಕಾರರನ್ನು ಯಾವುದೇ ದಯೆ ದಾಕ್ಷಿಣ್ಯವಿಲ್ಲದೆ ಸೇನೆ ಎದುರಿಸುತ್ತಿದೆ. ಸೇನೆಯ ಹತ್ಯೆ ಮಾಡಿದವರಲ್ಲಿ ಅತ್ಯಂತ ಚಿಕ್ಕವಳು ಖಿನ್ ಮ್ಯೋ ಚಿತ್. ಇತ್ತೀಚೆಗೆ ಮೊಂಡಲಾಯ್‍ನಲ್ಲಿ ಸೇನೆಯ ಗುಂಡಿಗೆ 14 ವರ್ಷದ ಹುಡುಗ ಬಲಿಯಾಗಿದ್ದನು.