ಮತ್ತೆ ಅಬ್ದುನ್ನಾಸರ್ ಮಅದನಿ ಕೋರ್ಟ್ ಬದಲಾವಣೆ: ವಿಳಂಬವಾಗುತ್ತಿರುವ ಬೆಂಗಳೂರು ಸ್ಫೋಟ ವಿಚಾರಣೆ

0
1074

ಸನ್ಮಾರ್ಗ ವಾರ್ತೆ

ಬೆಂಗಳೂರು: ಪಿಡಿಪಿ ಅಧ್ಯಕ್ಷ ಅಬ್ದುನ್ನಾಸರ್ ಮಅದನಿಯವರು ಆರೋಪಿಯಾಗಿರುವ ಬೆಂಗಳೂರು ಸ್ಫೋಟ ಪ್ರಕರಣದ ವಿಚಾರಣೆ ತಡವಾಗಲಿದೆ. ಯುಎಪಿಎ ಪ್ರಕರಣದ ವಿಚಾರಣೆ ವಿಳಂಬವಾಗುತ್ತಿದೆ ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕರ್ನಾಟಕ ಹೈ ಕೋರ್ಟ್ ಅನುಕೂಲಕರ ತೀರ್ಪು ನೀಡಿದೆ.

ಈ ಪ್ರಕಾರ ಬೆಂಗಳೂರಿನ ವಿವಿಧ ಕೋರ್ಟಿನಲ್ಲಿ ವಿಚಾರಣೆಯಲ್ಲಿರುವ 56 ಯುಎಪಿಯ ಪ್ರಕರಣಗಳನ್ನು ಒಂದೇ ಕೋರ್ಟಿಗೆ ತರಲಾಗುತ್ತಿದೆ.

ವಿಶೇಷ ಕೋರ್ಟಿನಲ್ಲಿ ವಿಚಾರಣೆ ನಡೆದಿದ್ದರೂ ಬೆಂಗಳೂರು ಸ್ಫೋಟದ ಪ್ರಕರಣದಲ್ಲಿ ವಿಚಾರಣೆ ಮಂದಗತಿಯಲ್ಲಿ ಸಾಗುತ್ತಿದೆ.

ಹೊಸಕೋರ್ಟಿಗೆ ಬದಲಾಯಿಸಿದರೆ ತನ್ನ ಪ್ರಕರಣದ ಪ್ರಕ್ರಿಯೆ ವಿಳಂಬವಾಗಲಿದೆ ಎಂದು ಮಅದನಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ದೂರುದಾರರು ತಿಳಿಸಿದ್ದರು. ಆರೋಪಿಗೆ ಕೋರ್ಟು ಯಾವುದು ಬೇಕೆಂದು ನಿಶ್ಚಯಿಸುವ ಅಧಿಕಾರವಿಲ್ಲ ಎಂದು ಪ್ರಸ್ತುತ ಅರ್ಜಿಯನ್ನು ಕೋರ್ಟ್ ತಳ್ಳಿಹಾಕಿದೆ.

ಸಾಕ್ಷಿಗಳು ಸರಿಯಾದ ಸಮಯಕ್ಕೆ ಬಾರದಿರುವುದು, ಹಲವು ಸಲ ಸಮನ್ಸ್ ಸಿಕ್ಕಿದರೂ ಸಾಕ್ಷಿಗಳಾದ ಪೊಲೀಸಧಿಕಾರಿಗಳು ಹಾಜರಾಗದಿರುವುದು, ಪ್ರಾಸಿಕ್ಯೂಟರ್ ಬದಲಾವಣೆ ಇತ್ಯಾದಿ ವಿಚಾರಣೆ ಶೆಡ್ಯೂಲ್ ಪಾಲನೆಯಾಗದ್ದರಿಂದ ಪ್ರಾಸಿಕ್ಯೂಶನ್‍ ಕಡೆಯ ಲೋಪದಿಂದಾಗಿ ವಿಚಾರಣೆ ಮಂದಗತಿಯಲ್ಲಿ ನಡೆಯುತ್ತಿದೆ ಎಂದು ಅರ್ಜಿಯಲ್ಲಿ ಮಅದನಿ ಸೂಚಿಸಿದ್ದರು. 2014ರಲ್ಲಿ ಮಅದನಿಗೆ ಜಾಮೀನು ನೀಡಿದ ವೇಳೆ ವಿಚಾರಣೆಯನ್ನು ನಾಲ್ಕು ತಿಂಗಳೊಳಗೆ ಮುಗಿಸುವುದಾಗಿ ಕರ್ನಾಟಕ ಸರಕಾರ ಸುಪ್ರೀಂ ಕೋರ್ಟಿಗೆ ಭರವಸೆ ನೀಡಿತ್ತು. ಆದರೆ ಈವರೆಗೆ ಬೆಂಗಳೂರು ಸ್ಫೋಟ ವಿಚಾರಣೆ ಮುಗಿಯದಿರುವುದು ವಿಪರ್ಯಾಸ ಎಂಬ ಅಭಿಪ್ರಾಯ ಕೇಳಿ ಬಂದಿದೆ.