ಸನ್ಮಾರ್ಗ ವಾರ್ತೆ
ಕಾರ್ತೂಂ: ಅಮೇರಿಕ ಜೊತೆಗಿನ ಒಪ್ಪಂದದ ಪ್ರಕಾರ 335 ಮಿಲಿಯನ್ ಡಾಲರ್ ನಷ್ಟ ಪರಿಹಾರವನ್ನು ಸುಡಾನ್ ನೀಡಿದೆ ಎಂದು ಅಮೆರಿಕದ ಸ್ಟೇಟ್ ಸೆಕ್ರಟರಿ ಆಂಟನಿ ಬ್ಲಿಕನ್ ಹೇಳಿದ್ದಾರೆ.
ಅಮೆರಿಕ ವಿರುದ್ಧ ದಾಳಿಯಲ್ಲಿ ಬಲಿಪಶುಗಳಿಗಾಗಿ ಈ ಹಣ ನೀಡಲಾಗಿದೆ. ಭಯೋತ್ಪಾದಕ ದೇಶ ಎಂಬ ಕಪ್ಪುಪಟ್ಟಿಯಿಂದ ಸುಡಾನನ್ನು ಅಮೆರಿಕ ಇತ್ತೀಚೆಗೆ ಕೈಬಿಟ್ಟಿತ್ತು.
ಸುಡಾನ್ ಮಾಜಿ ಅಧ್ಯಕ್ಷ ಉಮರ್ ಅಲ್ ಬಶೀರ್ ರ ಬೆಂಬಲದಲ್ಲಿ 1998ರಲ್ಲಿ ಅಲ್‍ಕಾಯಿದ ನಡೆಸಿದ ಕೆನ್ಯಾ, ತಾಂಝೇನಿಯಾದ ಅಮೆರಿಕ ದೂತವಾಸಕ್ಕೆ ಬಾಂಬು ದಾಳಿಯಲ್ಲಿ ಬಲಿಯಾದವರಿಗೆ ಮತ್ತು ಅದರಲ್ಲಿ ಪಾರಾದವರಿಗೆ ತಾತ್ಕಾಲಿಕ ಮತ್ತು ನಾಗರಿಕ ಬೆಂಬಲದ ಸರಕಾರ ನಷ್ಟ ಪರಿಹಾರ ನೀಡುತ್ತಿದೆ ಎಂದು ಅಲ್‍ಜಝೀರ ಬುಧವಾರ ವರದಿ ಮಾಡಿತ್ತು.












