ಸನ್ಮಾರ್ಗ ವಾರ್ತೆ
ಕತಾರ್: ಅನಿವಾಸಿ ಭಾರತೀಯರ ಪಾಲಿನ ಆಪದ್ಭಾಂದವರಾಗಿ, ಕತಾರ್ ದೇಶದ ಪೊಲೀಸ್ ಇಲಾಖೆಯಲ್ಲಿ ಕಳೆದ 30 ವರ್ಷಗಳಿಂದ ಸೇವೆಯಲ್ಲಿದ್ದ ಸಮಾಜ ಸೇವಕ ಅಬ್ದುಲ್ಲತೀಫ್ ಮಡಿಕೇರಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ.
ಕತಾರ್ ಇಂಡಿಯನ್ ಸೋಷಿಯಲ್ ಫೋರಂ ಇದರ ಕಾರ್ಯದರ್ಶಿಯಾಗಿ, ಸಕ್ರಿಯ ಕಾರ್ಯಕರ್ತ, ಸಮಾಜ ಸೇವೆ ಮತ್ತು ಮಾನವೀಯ ಸೇವೆಗಳಲ್ಲಿ ಯಾವಾಗಲೂ ಮುಂಚೂಣಿಯಲ್ಲಿದ್ದು ಕೊಡುಗೈ ದಾನಿಗಳು ಆಗಿದ್ದ ಅಬ್ದುಲ್ ಲತೀಫ್ ಮಡಿಕೇರಿಯವರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ ಎಂದು ತಿಳಿದು ಬಂದಿದೆ.
ಇವರ ನಿಧನಕ್ಕೆ ಪಾಪ್ಯುಲರ್ ಫ್ರಂಟ್ ಕೊಡಗು ಜಿಲ್ಲಾಧ್ಯಕ್ಷರಾದ ಶೌಕತ್ ಅಲಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸೃಷ್ಟಿಕರ್ತನು ಮೃತರ ಕುಟುಂಬ ವರ್ಗ ಮತ್ತು ಎಲ್ಲಾ ಹಿತೈಷಿಗಳಿಗೂ ಅವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿ ಕರುಣಿಸಲಿ ಎಂದು ಸಂತಾಪ ಸೂಚಿಸಿದ್ದಾರೆ.












