ಸನ್ಮಾರ್ಗ ವಾರ್ತೆ
ತೊಡುಪುಝ: ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕೆಂದು ಶಾಸಕ ಪಿಸಿ ಜಾರ್ಜ್ ಹೇಳಿದ್ದು, ಎಚ್ಆರ್ಡಿಎಸ್ ಎಂಬ ಎನ್ಜಿಒ ಏರ್ಪಡಿಸಿದ ಭಾರತ ಸ್ವಾತಂತ್ರ್ಯಕ್ಕೆ 75 ವರ್ಷ ಪೂರ್ತಿಯಾದ ಸ್ಮರಣಾರ್ಥ ಕಾರ್ಯಕ್ರಮದ ಉದ್ಘಾಟನೆ ಮಾಡಿದ ಅವರು ಲವ್ ಜಿಹಾದ್ ಇಲ್ಲ ಎಂದು ಸುಪ್ರೀಂ ಕೋರ್ಟು ಹೇಳೀತು ಆದರೆ ಅದು ಇದೆ ಎಂಬುದು ನನಗೆ ಗೊತ್ತು. ಸುಪ್ರೀಂ ಕೋರ್ಟು ತಪ್ಪಾದ ತೀರ್ಪುಗಳನ್ನು ನೀಡಿವುದನ್ನು ಕೊನೆಗೊಳಿಸಬೇಕೆಂದಾದರೆ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಘೋಷಿಸಬೇಕು ಎಂದು ಅವರು ಹೇಳಿದರು.
ನಮ್ಮ ದೇಶ ಸಂವಿಧಾನದ ಪ್ರಕಾರ ಜಾತ್ಯತೀತ ಪ್ರಜಾಪ್ರಭುತ್ವ ಸಮಾಜವಾದಿ ದೇಶವಾಗಿದೆ. ಆ ರಾಷ್ಟ್ರದಲ್ಲಿ ಲವ್ ಜಿಹಾದ್ ಸೇರಿದಂತೆ ರಾಜಕೀಯದ ಆಚೆಗಿನ ಕೋಮು ನಿಲುವುಗಳು ನಡೆಯುತ್ತಿದೆ. ಅರೇಬಿಯನ್ ದೇಶಗಳನ್ನು ಗಮನಿಸಿದರೆ ಅಲ್ಲಿ ಇಸ್ಲಾಮಿಕ್ ಕಾನೂನುಗಳಲ್ಲದೇ ಬೇರಾವುದೂ ಸರಿಯಲ್ಲ ಎಂದು ಹೇಳುತ್ತಾರೆ. ಅಮೆರಿಕ ಸಹಿತ ದೇಶಗಳು ಆ ಸ್ಥಿತಿಯಲ್ಲಿದೆ. ಈಗ ಸ್ವಲ್ಪ ಬದಲಾವಣೆಯಾಗಿದೆ. ಫ್ರಾನ್ಸ್ನ್ನು ಮುಸ್ಲಿಮರು ಆಕ್ರಮಿಸಿ ಮುಸ್ಲಿಂ ದೇಶ ಮಾಡುತ್ತಿದ್ದಾರೆ. ಇಂಗ್ಲೆಂಡ್ ಕ್ರೈಸ್ತರ ದೇಶವಾದರೂ ಮುಸ್ಲಿಮರು ಅಲ್ಲಿಯೂ ಅತಿಕ್ರಮಿಸುತ್ತಿದ್ದಾರೆ.
2030ಕ್ಕೆ ಭಾರತ ಮುಸ್ಲಿಂ ದೇಶವಾಗಿ ಬದಲಿಸಲು ಉದ್ದೇಶಿಸಿದ ಅವರು ಕೇರಳದಲ್ಲಿ ಅವರ ಕೆಲಸ ಮಾಡುತ್ತಿದ್ದಾರೆ. ಆದರೆ, ಪ್ರಧಾನಿ ನೋಟು ನಿಷೇಧಿಸಿದ್ದರಿಂದ ಅದಕ್ಕೆ ತಡವಾಗಿದೆ ಎಂಬುದು ಸತ್ಯ. ಇದನ್ನು ಯಾರೂ ಹೊರಗೆ ಹೇಳುವುದು ಬೇಡವೆಂದು ಎಲ್ಲರೂ ಮುಚ್ಚಿಟ್ಟಿದ್ದಾರೆ ಎಂದು ಪಿ.ಸಿ ಜಾರ್ಜ್ ಆರೋಪಿಸಿದರು.












