ಕೊರೋನ ಕರ್ಫ್ಯೂ ಉಲ್ಲಂಘಿಸಿ ನಡುರಸ್ತೆಯಲ್ಲಿ ಯುವತಿಯ ಡ್ಯಾನ್ಸ್; ಪ್ರಕರಣ ದಾಖಲು

0
764

ಸನ್ಮಾರ್ಗ ವಾರ್ತೆ

ರಾಜ್‍ಕೋಟ್: ಕರ್ಫ್ಯೂ ಉಲ್ಲಂಘಿಸಿ ರಸ್ತೆಯ ನಡುವೆ ಬಂದು ಡ್ಯಾನ್ಸ್ ಮಾಡಿದ ರಾಜ್‍ಕೋಟಿನ ಯುವತಿ ಪ್ರಿಶಾ ರಾಠೋಡ್(25) ವಿರುದ್ಧ ಕೊರೋನ ಮಾರ್ಗಸೂಚಿ ಉಲ್ಲಂಘಿಸಿದ್ದಕ್ಕಾಗಿ ನಗರ ಪೊಲೀಸರು ಕೇಸು ದಾಖಲಿಸಿದ್ದಾರೆ.

ಇಂಗ್ಲಿಷ್ ಹಾಡಿಗೆ ಯುವತಿ ನೃತ್ಯ ಮಾಡಿ ರೆಕಾರ್ಡ್ ಮಾಡಿದ್ದು ವೀಡಿಯೊವನ್ನು ಇನ್ಸ್ಟಾಗ್ರಾಮ್‍ನಲ್ಲಿ ಹಾಕಿದ್ದರು. ಇದು ನಂತರ ವೈರಲ್ ಆಗಿತ್ತು. ಎಪ್ರಿಲ್ 12ಕ್ಕೆ ರಾತ್ರೆ 11 ಗಂಟೆಗೆ ಮಹಿಳಾ ಕಾಲೇಜಿನ ಅಂಡರ್ಪಾಸಿನ ಸಮೀಪದಲ್ಲಿ ವೀಡಿಯೊ ಚಿತ್ರೀಕರಿಸಲಾಗಿತ್ತು. ಯುವತಿಯು ಅಪಾರ ಫಾಲೊವರ್ಸ್‌ಗಳನ್ನು ಹೊಂದಿರುವ ಇನ್ಸ್ಟಾಗ್ರಾಮ್‍ನಲ್ಲಿ ವೀಡಿಯೊವನ್ನು ಮೊದಲು ಪೋಸ್ಟ್ ಮಾಡಿದ್ದರು. ಯುವತಿಯ ಸಾಮಾಜಿಕ ಮಾಧ್ಯಮ ಖಾತೆಯನ್ನು ಪರಿಶೀಲಿಸಿದಾಗ ಇಂತಹ ಹಲವಾರು ವೀಡಿಯೊಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದರು.

ಕ್ರಮಕೈಗೊಳ್ಳುವುದರೊಂದಿಗೆ ತನ್ನ ಪ್ರವೃತ್ತಿಗೆ ಪ್ರೀಶಾ ಕ್ಷಮೆ ಯಾಚಿಸಿ ಇನ್ನೊಂದು ವೀಡಿಯೊ ಪೋಸ್ಟ್ ಮಾಡಿದ್ದರು. ತನ್ನ ತಪ್ಪು ಮನವರಿಕೆಯಾಗಿದೆ. ಡ್ಯಾನ್ಸ್ ವೀಡಿಯೊ ತೆಗೆದು ಹಾಕಿದ್ದೇನೆ. ಕೆಲವು ಜನರು ಅದನ್ನು ವೈರಲ್ ಮಾಡುತ್ತಿದ್ದಾರೆ. ಎಲ್ಲರೂ ಸರಕಾರದ ಕಾನೂನು ಪಾಲಿಸಬೇಕೆಂದು ಪ್ರೀಶಾ ರಾಥೋಡ್ ವೀಡಿಯೊದಲ್ಲಿ ಹೇಳಿದರು.