ಕೆನಡಾ: ಝೂಮ್ ಮೀಟಿಂಗ್‍ನಲ್ಲಿ ನಗ್ನವಾಗಿ ಕಂಡುಬಂದ ಸಂಸದ; ವಿಪಕ್ಷಗಳಿಂದ ಶಿಸ್ತು ಕ್ರಮಕ್ಕೆ ಆಗ್ರಹ

0
717

ಸನ್ಮಾರ್ಗ ವಾರ್ತೆ

ಒಟ್ಟೊವ,ಎ.17: ಕೊರೋನದ ಕಾರಣದಿಂದಾಗಿ ಕೆನಡದಲ್ಲಿ ಝೂಮ್ ಮೀಟಿಂಗ್ ನಡೆದು ಅದರಲ್ಲಿ ಲಿಬರಲ್ ಪಾರ್ಟಿ ಸಂಸದ ವಿಲಿಯಂ ಇತರೆ ಸಂಸದರ ಮುಂದೆ ನಗ್ನಾವಸ್ಥೆಯಲ್ಲಿ ಸ್ಕ್ರೀನ್‍ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಶಿಸ್ತು ತೋರಿದ ಘಟನೆಯು ಬುಧವಾರ ನಡೆದಿತ್ತು. ನಂತರ ಇದರ ಸ್ಕ್ರೀನ್ ಶಾಟ್‍ಗಳನ್ನು ಕನೆಡಾದ ಮಾಧ್ಯಮಗಳು ಬಹಿರಂಗಪಡಿಸಿದ್ದವು.

ಇದಾದ ಬಳಿಕ ‘ಎಲ್ಲರ ಕ್ಷಮೆ ಯಾಚಿಸುತ್ತಿದ್ದೇನೆ. ನನ್ನ ಕಡೆಯಿಂದಾದ ದುರದೃಷ್ಟಕರ ಪ್ರಮಾದ ಇದು ಎಂದು ವಿಲಿಯಂ’ ಹೇಳಿದ್ದಾರೆ.

“ದುರದೃಷ್ಟಕರವಾಗಿ ನಾನಿಂದು ಒಂದು ತಪ್ಪು ಮಾಡಿದೆ. ಇದರ ಕುರಿತು ನನಗೆ ಲಜ್ಜೆಯಿದೆ. ಜಾಗಿಂಗ್ ಬಳಿಕ ಮೀಟಿಂಗ್‍ನಲ್ಲಿ ಭಾಗವಹಿಸಲು ಬಟ್ಟೆ ಬದಲಾಯಿಸುವ ವೇಳೆ ನನ್ನ ಕ್ಯಾಮರಾ ಆಕಸ್ಮಿಕವಾಗಿ ಆನ್ ಆಯಿತು. ಪಾರ್ಲಿಮೆಂಟಿನ ನನ್ನ ಎಲ್ಲ ಸಹಯೋಗಿಗಳೊಂದಿಗೆ ಪ್ರಮಾಣಿಕವಾಗಿ ಕ್ಷಮೆಯಾಚಿಸುವೆ. ಇದು ನಿಜವಾಗಿಯೂ ಒಂದು ಪ್ರಮಾದವಾಗಿದೆ. ಇನ್ನು ಹೀಗಾಗದಂತೆ ನೋಡಿಕೊಳ್ಳುವೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇಂಟರ್ನಲ್ ಕಾನ್ಫರೆನ್ಸ್ ಫೀಡ್ ಆದ್ದರಿಂದ ಪಾರ್ಲಿಮೆಂಟಿನ ಸದಸ್ಯರು ಮತ್ತು ಅಧಿಕಾರಿಗಳು ಮಾತ್ರವೇ ವಿಲಿಯಂರ ನಗ್ನಾವತಾರವನ್ನು ನೋಡಿದ್ದಾರೆ. ಅವರು ಮಾತಾಡದ್ದರಿಂದ ಇದು ಸಾರ್ವಜನಿಕ ಫಿಲ್ಡ್‌ ಲನಲ್ಲಿ ಕಂಡು ಬಂದಿದೆ. ಹೌಸ್ ಆಫ್ ಕಾಮನ್ಸ್‌ನಲ್ಲಿ ಅವರ ವಿರುದ್ಧ ಆಶಿಸ್ತುಗೆ ಕ್ರಮ ಜರಗಿಸಲಾಗುವುದು. ಘಟನೆಯ ಕುರಿತು ಅಧ್ಯಕ್ಷ ಜಸ್ಟಿನ್ ಟ್ರುಡೋ ಪ್ರತಿಕ್ರಿಯಿಸಿಲ್ಲ. ಆದರೆ ಕೆನಡಾದ ಪ್ರತಿಪಕ್ಷಗಳು ಈ ಕುರಿತು ವಿವಾದ ಎಬ್ಬಿಸಿವೆ.