ಒಂದೇ ದಿನದಲ್ಲಿ 2.73 ಲಕ್ಷ ಜನರಿಗೆ ಕೊರೋನ ಸೋಂಕು; 1,619 ಮಂದಿ ಸಾವು

0
561

ಸನ್ಮಾರ್ಗ ವಾರ್ತೆ

ನವದೆಹಲಿ: ಭಾರತದಲ್ಲಿ ಮತ್ತೊಮ್ಮೆ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಪ್ರಮಾಣದ ಏರಿಕೆ ಕಾಣುತ್ತಿದ್ದು ನಿನ್ನೆ ಒಂದೇ ದಿನ 2,73,810 ಮಂದಿಗೆ ಸೋಂಕು ತಗುಲಿದೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 1,50,61,919ಕ್ಕೆ ಏರಿಕೆಯಾಗಿದೆ. 1,619 ಮಂದಿ ನಿನ್ನೆ ಒಂದೇ ದಿನ ಸೋಂಕಿಗೆ ಬಲಿಯಾಗಿದ್ದು, ದೇಶದಲ್ಲಿ ಈವರೆಗೆ ಕೊರೋನ ಸೋಂಕಿಗೆ ಒಟ್ಟು 1,78,769 ಮಂದಿ ಬಲಿಯಾಗಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಸೋಂಕಿನಿಂದ ಗುಣಮುಖವಾಗಿ ಬಿಡುಗಡೆಯಾದವರ ಸಂಖ್ಯೆ 1,44,178 ಆಗುವ ಮೂಲಕ ಈವರೆಗೆ 1,29,53,821 ಮಂದಿ ಗುಣಮುಖರಾಗಿದ್ದಾರೆ.

ಈ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಭಾರತದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 19 ಲಕ್ಷ ಗಡಿ ದಾಟಿದೆ.