ಅದಾನಿ ಮತ್ತು ಅಂಬಾನಿಯವರಿಗೆ ನೋಟು ನಿಷೇಧದ ಬಗ್ಗೆ ತಿಳಿದಿತ್ತು: ಕ್ಯಾಮರಾದಲ್ಲಿ ಸೆರೆಯಾದ ಬಿಜೆಪಿ ಶಾಸಕನ ಮಾತು

0
3055

ಅದಾನಿ ಮತ್ತು ಅಂಬಾನಿಗಳಿಗೆ ನೋಟು ರದ್ಧತಿ ಬಗ್ಗೆ ಮೊದಲೇ ತಿಳಿದಿತ್ತು ಎಂಬುವುದು ಈಗ ವಾಟ್ಸಾಪ್ ಗುಂಪುಗಳ ಚರ್ಚೆಯ ವಿಷಯ. ಈಗ ಇದು ಸಾಮಾನ್ಯ ಜನರೊಂದಿಗೆ ಆಡಳಿತ ಪಕ್ಷದ ಚರ್ಚಾ ವಿಷಯವೂ ಆಗಿದೆ.

ಅದಾನಿ ಮತ್ತು ಅಂಬಾನಿಗಳು ಕೇಂದ್ರದ ಆಡಳಿತ ವರ್ಗಕ್ಕೆ ನಿಕಟವರ್ತಿಗಳು, ₹500 ಮತ್ತು  ₹1,000 ರೂಪಾಯಿಗಳ ರದ್ಧತಿಯ ವಿಚಾರವು ನವೆಂಬರ್ ತಿಂಗಳ ಒಂಬತ್ತನೇ ದಿನಾಂಕದಂದು ಜಾರಿಯಾಗುವ ಮೊದಲೇ ಅವರಿಗೆ ತಿಳಿದಿತ್ತು. ಎಂದು ರಾಜಸ್ಥಾನದ ಬಿಜೆಪಿ ಶಾಸಕರೋರ್ವರು ಹೇಳುವ  ಸಂಭಾಷಣೆಯನ್ನು ಚಿತ್ರೀಕರಿಸಿದ ವೀಡಿಯೋ  ಅಂತರ್ಜಾಲದಲ್ಲಿ ಹರಿದಾಡುತ್ತಿದೆ .

ಸಂಭಾಷಣೆಯಲ್ಲಿ ರಾಜಸ್ಥಾನ ಕೋಟಾದ ಬಿಜೆಪಿ ಶಾಸಕ  ಭವಾನಿ ಸಿಂಗ್ ರಾಜಾವತ್ ಹೇಳುತ್ತಾರೆ, “ಅದಾನಿ, ಅಂಬಾನಿ ಮತ್ತು ಇತರರು ಅದರ ಬಗ್ಗೆ ತಿಳಿದಿದ್ದಾರೆ (ನೋಟು ರದ್ಧತಿ ) ಮೊದಲೇ ಅವರಿಗೆ ಒಂದು ಸುಳಿವು ನೀಡಲಾಗಿತ್ತು  ಮತ್ತು ಅದಕ್ಕನುಗುಣವಾಗಿ ಅವರು ವ್ಯವಸ್ಥೆಗಳನ್ನು ಮಾಡಿದ್ದಾರೆ . ನೀವು (ಸರಕಾರ) ಹೊಸ ಕರೆನ್ಸಿಯನ್ನು ಬೇಡಿಕೆಯಂತೆ ಮುದ್ರಿಸಬೇಕು. “

ನೋಟು  ನಿಷೇಧವು ವ್ಯವಸ್ಥಿತ ಯೋಜನೆಯಲ್ಲ ಮತ್ತು ಈ ಪ್ರಕ್ರಿಯೆಯನ್ನು ಹಂತ ಹಂತವಾಗಿ ಜಾರಿಗೊಳಿಸಬೇಕಿತ್ತು ಎಂದು ಅವರು ವೀಡೀಯೋದಲ್ಲಿ ಹೇಳಿದ್ದಾರೆ.

ಭವಾನಿ ಸಿಂಗ್ ಹಿಂದಿನಿಂದಲೂ  ಅನೇಕ ವಿವಾದಗಳಲ್ಲಿ ಭಾಗಿಯಾಗಿದ್ದಾರೆ. ಕೋಟಾ ತರಬೇತಿ ಕೇಂದ್ರಗಳಲ್ಲಿ ಬಿಹಾರಿ ವಿದ್ಯಾರ್ಥಿಗಳು ಅಪರಾಧ ಹಿನ್ನೆಲೆಯ ಪರೀಕ್ಷೆಗೆ ಒಳಗಾಗಬೇಕೆಂದು ಅವರು ಒತ್ತಾಯಿಸಿದ್ದರು. ಮತ್ತು ತಲೆ ಬೋಳಾಗುವುದನ್ನು  ತಪ್ಪಿಸಲು ಹೆಲ್ಮೆಟ್ ಗಳನ್ನು ಧರಿಸದಂತೆ  ಅವರು ದ್ವಿಚಕ್ರ ವಾಹನ ಚಾಲಕರಿಗೆ ಸಲಹೆ ನೀಡಿದ್ದರು.

 

ಕೃಪೆ: ಇಂಡಿಯನ್ ಎಕ್ಸ್‌ಪ್ರೆಸ್‌
ಕನ್ನಡಕ್ಕೆ: ಆಯಿಶತುಲ್ ಅಫೀಫಾ