ಫೆಲೆಸ್ತೀನಿಗೆ ನೆರವು ಮುಂದುವರಿಸುತ್ತೇವೆ: ಕತರ್

0
513

ಸನ್ಮಾರ್ಗ ವಾರ್ತೆ

ದೋಹಾ: ಫೆಲೆಸ್ತೀನಿ ಪ್ರತಿರೋಧ ಆಂದೋಲನ ಹಮಾಸ್‍ನ ರಾಜಕೀಯ ಮುಖ್ಯಸ್ಥ ಡಾ. ಇಸ್ಮಾಯೀಲ್ ಹನಿಯ್ಯ ದೋಹದಲ್ಲಿ ಅಮೀರ್ ಶೇಕ್ ತಮೀಂ ಬಿನ್ ಹಮದ್ ಅಲ್‍ಥಾನಿಯವರನ್ನು ಭೇಟಿಯಾಗಿ ಚರ್ಚಿಸಿದ್ದು, ಫೆಲೆಸ್ತೀನ್ ಗೆ ಕತರ್ ತನ್ನ ನೆರವನ್ನು ಮುಂದುವರೆಸುವುದಾಗಿ ನಿರ್ಧರಿಸಿದೆ.

ಗಾಝಾದಲ್ಲಿ ಇಸ್ರೇಲ್-ಹಮಾಸ್ ನಡುವಿನ ಕದನ ವಿರಾಮ ಒಪ್ಪಂದ ಕಳೆದ ವಾರ ಅಸ್ತಿತ್ವಕ್ಕೆ ಬಂದಿತ್ತು. ಕದನವಿರಾಮ ಅಸ್ತಿತ್ವಕ್ಕೆ ಬರಲು ಕತರ್ ವಿವಿಧ ಕ್ರಮಗಳನ್ನು ಕೈಗೊಂಡಿದೆ‌.

ಫೆಲಸ್ತೀನಿಗೆ ಎಲ್ಲ ರೀತಿಯ ಬೆಂಬಲ ಸಹಾಯ ನೀಡುವುದಕ್ಕಾಗಿ ಡಾ. ಇಸ್ಮಾಯೀಲ್ ಹನಿಯ್ಯ ಕತರ್ ಗೆ ಕೃತಜ್ಞತೆ ಸೂಚಿಸಿದರು. ಇಸ್ರೇಲ್ ದಾಳಿ ನಿಲ್ಲುವಂತಾಗಲು ಕತರ್ ದೊಡ್ಡ ಪಾತ್ರ ವಹಿಸಿತ್ತು. ಅದರಿಂದ ಶಾಂತ ವಾತಾವರಣ ಈಗ ಗಾಝದಲ್ಲಿದೆ.

ಫೆಲೆಸ್ತೀನಿಗೆ ಇನ್ನು ಮುಂದೆಯೂ ಕತರ್ ಸಹಾಯ ಕೊಡಲಿದೆ ಎಂದು ಅಮಿರ್ ಭರವಸೆ ನೀಡಿದರು.

ರಾಷ್ಟ್ರದ ಹಿತ ಸಾಧಿಸುವಲ್ಲಿ ಫೆಲೆಸ್ತೀನಿನೊಂದಿಗೆ ಎಲ್ಲರೂ ಬೆಂಬಲವಾಗಿ ನಿಲ್ಲಬೇಕು ಎಂದು ಕತರ್ ಅಮಿರ್ ಈ ವೇಳೆ ಹೇಳಿದರು. 1967ರ ಗಡಿ ಒಪ್ಪಂದ ಪ್ರಕಾರ ಪೂರ್ವ ಜರುಸಲೇಂ ರಾಜಧಾನಿಯಾಗಿರುವ ಸ್ವತಂತ್ರ ಸಾರ್ವಭೌಮ ರಾಷ್ಟ್ರ ಸಮಸ್ಯೆಯ ಶಾಶ್ವತ ಪರಿಹಾರ ಎಂಬ ಕತರ್ ಅಮಿರ್ ನಿಲುವನ್ನು ಪುನರುಚ್ಚರಿಸಿದರು. ವಲಯ ಮತ್ತು ಜಗತ್ತಿನ ಸುರಕ್ಷೆಗೆ ಸುಸ್ಥಿರತೆಗೆ ಶಾಂತಿಯ ಮಾರ್ಗವೂ ಅದು. ಫೆಲೆಸ್ತೀನಿನ ಅತ್ಯಂತ ಹೊಸ ಬೆಳವಣಿಗೆಗಳ ಕುರಿತು ಎರಡು ನಾಯಕರು ಪರಸ್ಪರ ಚರ್ಚಿಸಿದರು.

ಈ ಬಾರಿ ಇಸ್ರೇಲ್ ದಾಳಿ ಆರಂಭಿಸಿದ ಕೂಡಲೇ ಒಂದು ಮಿಲಿಯನ್ ಡಾಲರ್ ಅನ್ನು ಕತರ್ ಫೆಲಸ್ತೀನಿ ಜನರಿಗೆ ಕೊಟ್ಟಿತ್ತು. ಕತರ್ ಚ್ಯಾರಿಟಿ ಸಹಾಯ ಯೋಜನೆ ಜಾರಿಗೆ ತಂದಿತ್ತು. ಹತ್ತು ವರ್ಷಗಳಿಂದ ಕತರ್ ರೆಡ್ ಕ್ರೆಸೆಂಟ್ ಸೊಸೈಟಿ ಫೆಲಸ್ತೀನ್ ರೆಡ್ ಕ್ರೆಸೆಂಟ್ ಸೊಸೈಟಿಯೊಂದಿಗೆ ಸಹಕರಿಸಿ ಜನಸೇವೆ, ಚಿಕಿತ್ಸೆ ಗೆ ನೆರವು ಒದಗಿಸುತ್ತಾ ಬಂದಿದೆ. ಗಾಝದ ಕತರ್ ರೆಡ್‍ ಕ್ರೆಸೆಂಟ್ ಸೊಸೈಟಿ ಇರುವ ಕಟ್ಟಡದ ಮೇಲೆ ಇಸ್ರೇಲ್ ಬಾಂಬು ಸುರಿಸಿತ್ತು.