ದ್ವೀಪದವರ ಜೀವನದ ಮೇಲೆ ಸವಾರಿ ಮಾಡಲು ಹೊರಟರೆ ಸಮಸ್ಯೆ ಸೃಷ್ಟಿಯಾಗಬಹುದು- ಅಲಿ ಮಣಿಕಾಫನ್

0
1076

ಸನ್ಮಾರ್ಗ ವಾರ್ತೆ

ಕೊಝೀಕೋಡ್: ಅನಗತ್ಯ ಕಾನೂನುಗಳನ್ನು ಲಕ್ಷದ್ವೀಪದಲ್ಲಿ ಜಾರಿಗೆ ತಂದರೆ ಸಮಸ್ಯೆ ಆಗಬಹುದು ಎಂದು ಪದ್ಮಶ್ರೀ ವಿಜೇತ ಖಗೋಳ ಶಾಸ್ತ್ರಜ್ಞ ಅಲಿ ಮಣಿಕಾಫನ್ ಹೇಳಿದ್ದಾರೆ. ಜನ ಜೀವನ ರೀತಿ, ಸಂಸ್ಕೃತಿ ಅಧ್ಯಯನಿಸಿ ಅವರೊಂದಿಗೆ ಚರ್ಚಿಸಿ ಅಧಿಕಾರಿಗಳು ಕೆಲಸ ಮಾಡಬೇಕು. ಅಡ್ಮಿಸ್ಟ್ರೇಟರ್‌ಗೆ ಅನಿಸಿದ್ದು ಈಗ ಲಕ್ಷದ್ವೀಪದಲ್ಲಿ ಜಾರಿಗೊಳಿಸಲಾಗುತ್ತಿದೆ. ಹಲವು ಅಡ್ಮಿಸ್ಟ್ರೇಟರ್‌ಗಳು ದ್ವೀಪದಲ್ಲಿ ಆಳ್ವಿಕೆ ಮಾಡಿದ್ದಾರೆ. ದ್ವೀಪ ನಿವಾಸಿಗಳ ಜೀವನ ಅರಿತು ಆನಂತರ ಅಧಿಕಾರಿಗಳು ಆಡಳಿತ ನಡೆಸುತ್ತಿದ್ದರು. ದ್ವೀಪದವರ ಜೀವನದ ಮೇಲೆ ಸವಾರಿ ಮಾಡಲು ಹೊರಟರೆ ಸಮಸ್ಯೆ ಸೃಷ್ಟಿಯಾಗಬಹುದು ಎಂದು ಮಣಿಕಾಫನ್ ಹೇಳಿದರು.

ಲಕ್ಷದ್ವೀಪ ಅಪರಾಧ, ಸಮಸ್ಯೆಗಳಿಲ್ಲದ ಸ್ಥಳ. ಗೂಂಡಾ ಕಾನೂನಿಲ್ಲಿಗೆ ಅಗತ್ಯವಿಲ್ಲ. ಸುಮ್ಮನೆ ಕೆಲವು ಮಂದಿಗೆ ಕೆಲಸ ಕೊಡಲು ದ್ವೀಪದಲ್ಲಿ ಪೊಲೀಸ್ ಠಾಣೆ ಸ್ಥಾಪಿಸಲಾಗಿದೆ. ಲಕ್ಷದ್ವೀಪಕ್ಕೆ ವಿಶೇಷ ಕಾನೂನು ಇದೆ. ಅದು ಇಷ್ಟು ಕಾಲದಿಂದ ಜಾರಿಯಲ್ಲಿತ್ತು ತುಂಬ ಶಾಂತಿಯಿಂದ ಜನರು ದ್ವೀಪದಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ಮಣೀಕಾಫನ್ ಹೇಳಿದರು.

ಪರಿಶಿಷ್ಟ ವಿಭಾಗದಲ್ಲಿ ಸರಕಾರ ದ್ವೀಪದ ಜನರನ್ನು ಪರಿಗಣಿಸುತ್ತಿದೆ. ಇತರರಂತೆ ದ್ವೀಪ ನಿವಾಸಿಗಳನ್ನು ಕಾಣಲು ಸಾಧ್ಯವಿಲ್ಲ. ಆದಿವಾಸಿ ಕಾನೂನಿನ ಸಂರಕ್ಷಣೆ ಇದೆ ಎಂದು ಅವರು ಹೇಳಿದರು.

ಗೋವಧೆ ನಿಷೇಧ ಅಗತ್ಯವಿಲ್ಲ. ಒಬ್ಬ ತಿನ್ನುವುದು ಇನ್ನೊಬ್ಬ ತಿನ್ನಬೇಕೆಂದು ಬಲವಂತ ಪಡಿಸುವ ಹಕ್ಕು ಯಾರಿಗೂ ಇಲ್ಲ. ಯಾವುದೇ ಆಹಾರ ತಿನ್ನುವ ಸ್ವಾತಂತ್ರ್ಯವನ್ನು ಭಾರತದ ಸಂವಿಧಾನ ನೀಡಿದೆ. ಮೊದಲು ಮಿನಿಕೊಯಿ ದ್ವೀಪದಲ್ಲಿ ಮಾತ್ರ ಮೀನು ಹಿಡಿಯುವುದಿತ್ತು. ನಂತರ ಲಕ್ಷದ್ವೀಪದ ಆಡಳಿತ ಇತರ ದ್ವೀಪ ನಿವಾಸಿಗಳಿಗೂ ಮೀನುಗಾರಿಕೆ ಕಲಿಸಿದರು. ದೋಣಿಯನ್ನು ಇರಿಸುವ ತಾತ್ಕಾಲಿಕ ಶೆಡ್‍ಗಳು ಮಾತ್ರ ಸಮುದ್ರ ತೀರದಲ್ಲಿವೆ ಎಂದು ಮೀಡಿಯಾ ವನ್‍ಗೆ ನೀಡಿದ ಸಂದರ್ಶನದಲ್ಲಿ ಅಲಿ ಮಣಿಕಾಫನ್ ಹೇಳಿದರು.