ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ನಾರದ ರಹಸ್ಯ ಕೆಮರಾ ಕಾರ್ಯಾಚರಣೆ ಪ್ರಕರಣದಲ್ಲಿ ಕೊಲ್ಕತಾ ಹೈಕೋರ್ಟ್ ತೀರ್ಪಿನ ವಿರುದ್ಧ ಸಿಬಿಐ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದೆ. ಇಬ್ಬರು ಸಚಿವರ ಸಹಿತ ನಾಲ್ವರು ತೃಣಮೂಲ ನಾಯಕರ ಗೃಹ ಬಂಧನದಲ್ಲಿರಿಸಿಲು ಹೈಕೋರ್ಟು ತೀರ್ಪು ನೀಡಿತ್ತು. ಇದನ್ನು ಸಿಬಿಐ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸುತ್ತಿದೆ. ಸಿಬಿಐ ಬಂಧಿಸಿದ ನಾಲ್ವರು ತೃಣಮೂಲ ಕಾಂಗ್ರೆಸ್ ನಾಯಕರಿಗೆ ಜಾಮೀನು ನೀಡುವ ಕುರಿತು ಕೇಸು ಪರಿಗಣಗಿಸಿದ ನ್ಯಾಯಾಧೀಶರ ನಡುವೆಯಿದ್ದ ಭಿನ್ನಮತದಿಂದ ಪ್ರಕರಣದ ದೊಡ್ಡ ಪೀಠಕ್ಕೆ ನೀಡಲಾಗಿತ್ತು. ಈ ಪೀಠ ಅವರನ್ನು ಗೃಹ ಬಂಧನದಲ್ಲಿರಿಸಲು ಆದೇಶಿಸಿದೆ.
ವಿಭಾಗೀಯ ಪೀಠದ ಈ ತೀರ್ಪನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟಿನ ಕದ ತಟ್ಟಿದೆ. ಬಂಧಿತರಿಗೆ ವೈದ್ಯಕೀಯ ಸಹಾಯ ಕೊಡಲು ಮತ್ತು ಇಬ್ಬರು ತೃಣಮೂಲ ಸಚಿವರಿಗೆ ಅಧಿಕೃತ ಫೈಲುಗಳನ್ನು ನೋಡಿ ವೀಡಿಯೊ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳೊಂದಿಗೆ ಸಮಾಲೋಚಿಸಲು ಹೈಕೋರ್ಟು ಅನುಮತಿ ನೀಡಿತ್ತು. ಈ ಆದೇಶಕ್ಕೆ ತಡೆಯಾಜ್ಞೆ ನೀಡಬೇಕೆಂದು ಸಿಬಿಐ ಹೈಕೋರ್ಟಿನ ಮೊರೆ ಹೊಗಿತ್ತು. ಹೈಕೋರ್ಟು ಸಿಬಿಐ ಬೇಡಿಕೆ ತಳ್ಳಿಹಾಕಿತ್ತು.












