ಸನ್ಮಾರ್ಗ ವಾರ್ತೆ
ಕೊಲ್ಕತಾ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ, ಹಿರಿಯ ಸಿಪಿಎಂ ನಾಯಕ ಬುದ್ಧದೇವ್ ಭಟ್ಟಾಚಾರ್ಯರವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಕೊರೋನ ಪೀಡಿತರಾಗಿರುವ ಇವರನ್ನು ಕೊಲ್ಕತಾದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಅವರಿಗೆ 77 ವರ್ಷ ವಯಸ್ಸು. ದೇಹದ ಆಕ್ಸಿಜನ್ ಪ್ರಮಾಣ ಕ್ರಮಾತೀತವಾಗಿ ಕಡಿಮೆಯಾಗುತ್ತಿದೆ ಎಂದು ವರದಿಯಾಗಿದೆ.
ಬುದ್ಧದೇವ್ ಭಟ್ಟಾಚಾರ್ಯರವರ ಪತ್ನಿ ಮೀರಾ ಭಟ್ಟಾಚಾರ್ಯ ಕಳೆದ ವಾರ ಕೊರೋನ ಪಾಸಿಟಿವ್ ಆಗಿದ್ದರು. ಕಳೆದ ಕೆಲವು ಕಾಲದಿಂದ ಭಟ್ಟಾಚಾರ್ಯ ಅನಾರೋಗ್ಯ ಪೀಡಿತರಾಗಿದ್ದಾರೆ. ಅವರಿಗೆ ಶ್ವಾಸಕೋಶಕ್ಕೆ ಸಂಬಂಧಿಸಿ ಉಸಿರುಗಟ್ಟುವಿಕೆ ರೋಗವಿದೆ. ಇದಲ್ಲದೆ ವಯೋಸಹಜ ಹಲವು ರೀತಿಯ ಅನಾರೋಗ್ಯದಿಂದ ಅವರು ಬಳಲುತ್ತಿದ್ದಾರೆ.












