ಸನ್ಮಾರ್ಗ ವಾರ್ತೆ
ಬ್ರಝೀಲ್: ಬ್ರಝೀಲ್ನಲ್ಲಿ ಕೊರೋನ ಹಾವಳಿ ಮುಂದುವರಿದಿದ್ದು, ವೈರಸ್ನಿಂದ ಈವರೆಗೆ 4,50,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವುದಾಗಿ ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.
ನಿನ್ನೆಯ ದಿವಸ ವೈರಸ್ಗೆ 2,173 ಮಂದಿ ಬಲಿಯಾಗಿದ್ದಾರೆ. ಈ ವರೆಗೆ 4,52,031 ಮಂದಿ ಕೊರೋನದಿಂದ ಮೃತಪಟ್ಟಿದ್ದಾರೆ. ಈವರೆಗೆ ಇಲ್ಲಿ 16,194,209 ಮಂದಿಗೆ ಕೊರೊನ ಬಂದಿದೆ. ನಿನ್ನೆ ಒಂದೇ ದಿನದಲ್ಲಿ ಒಟ್ಟು 73,453 ಕೊರೊನ ಪ್ರಕರಣಗಳು ವರದಿಯಾಗಿವೆ.
14.6 ದಶಲಕ್ಷಕ್ಕೂ ಹೆಚ್ಚು ಮಂದಿ ಕೊರೋನ ದಿಂದ ಗುಣಮುಖರಾಗಿದ್ದಾರೆ ಎಂದು ಅಲ್ಲಿನ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.












