ಸನ್ಮಾರ್ಗ ವಾರ್ತೆ
ಮಂಜೇಶ್ವರ : ಕೋರೋಣ ರೋಗ ವಿವಿಧ ಕಡೆಗಳಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟೀಮ್ ವೆಲ್ಫೇರ್ ಕಾರ್ಯಕರ್ತರು ಮಂಜೇಶ್ವರ ಪರಿಸರದಲ್ಲಿ ಅಣು ನಾಶಕ ಸಿಂಪಡಣೆ ಮಾಡುವ ಮೂಲಕ ಸ್ಯಾನಿಟೈಝಷನ್ ಮಾಡಿದರು. ವೆಲ್ಫೇರ್ ಪಾರ್ಟಿ ಪಂಚಾಯತ್ ಕಮಿಟಿ ಸದಸ್ಯರಾದ ಆದಮ್ ಕುಂಜತ್ತೂರ್ ರವರ ನೇತೃತ್ವದಲ್ಲಿ ನೈರ್ಮಲ್ಯೀಕರಣ ಕೆಲಸವು ನೆರವೇರಿತು.
ಮಂಜೇಶ್ವರ ರೈಲು ನಿಲ್ದಾಣ, ಸರಕಾರಿ ಆಸ್ಪತ್ರೆ, ಕೆ.ಎಸ್.ಸಿ.ಬಿ ಕಛೇರಿ, ಹೋಮಿಯೋ ಡಿಸ್ಪೆನ್ಸರಿ, ನ್ಯಾಯಬೆಲೆ ಅಂಗಡಿ, ಮೈಮೂನ್ ಜುಮಾ ಮಸೀದಿ, ಮಂಜೇಶ್ವರ ಎಸ್.ಎ.ಟಿ ಹೈಸ್ಕೂಲ್ ಮುಂತಾದ ಕಡೆಗಳಲ್ಲಿ ಅಣು ನಾಶಕ ಸಿಂಪಡಿಸಲಾಯಿತು. ಫ್ರಟರ್ನಿಟಿ ಮೂವ್ ಮೆಂಟ್ ನ ಕಾರ್ಯಕರ್ತರಾದ ರಾಝಿಕ್ ಮಂಜೇಶ್ವರ, ಇಖ್ವಾನ್ ಮಂಜೇಶ್ವರ ಮತ್ತಿತರರು ಭಾಗವಹಿಸಿದ್ದರು.













