ಬಂಟ್ವಾಳ: ನಿವೃತ್ತ ಶಿಕ್ಷಕ ಅಬ್ದುಲ್ ಖಾದರ್ ನಿಧನಕ್ಕೆ ಜಮಾಅತೆ ಇಸ್ಲಾಮಿ ಹಿಂದ್ ಸಂತಾಪ

0
503

ಸನ್ಮಾರ್ಗ ವಾರ್ತೆ

ಬಂಟ್ವಾಳ: ಇಲ್ಲಿನ ನಾವೂರು ಅಗ್ರಹಾರದ ನಿವೃತ್ತ ಶಿಕ್ಷಕ ಅಬ್ದುಲ್ ಖಾದರ್ ಅವರ ನಿಧನಕ್ಕೆ ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ನಗರಾಧ್ಯಕ್ಷ ಕೆ. ಎಂ. ಅಶ್ರಫ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ತಪ್ಪುಗಳನ್ನು ಅಲ್ಲಾಹನು ಕ್ಷಮಿಸಲಿ ಮತ್ತು ಸ್ವರ್ಗದಲ್ಲಿ ಉನ್ನತ ಸ್ಥಾನವನ್ನು ನೀಡಲಿ ಎಂದು ಪ್ರಾರ್ಥಿಸಿರುವ ಅವರು, ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ಅಲ್ಲಾಹನು ದಯಪಾಲಿಸಲಿ ಎಂದು ಸಂತಾಪ ಸೂಚಿಸಿದ್ದಾರೆ.

ಅಬ್ದುಲ್ ಖಾದರ್ ಅವರು ಮೇ 26ರಂದು ರಾತ್ರಿ ನಿಧನರಾಗಿದ್ದರು. 27 ರಂದು ಬೆಳಿಗ್ಗೆ ಅವರ ಸ್ವಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಿತ್ತು.

ಮೃತರು ಜಿಐಓ ರಾಜ್ಯಾಧ್ಯಕ್ಷೆ ಹುಮೇರಾ ಬಾನು ಅವರ ಮಾವ ಆಗಿದ್ದು, ಜಮಾಅತೆ ಇಸ್ಲಾಮಿ ಹಿಂದ್ ಕಾರ್ಯಕರ್ತ ಶಬ್ಬೀರ್ ಅಹ್ಮದ್ ಮತ್ತು ಹಿತೈಷಿ ಝಿಯಾವುದ್ದೀನ್ ಅವರ ತಂದೆಯಾಗಿದ್ದಾರೆ. ಹಾಗೆಯೇ ಮೃತರ ಮಗಳು ಅಶುರಾ ಬಾನು ಜಿ ಐ ಓ ರಾಜ್ಯ ಸಲಹಾ ಸಮಿತಿಯ ಸದಸ್ಯರಾಗಿದ್ದಾರೆ.

ನಿವೃತ್ತ ಶಿಕ್ಷಕರಾಗಿದ್ದ ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದ ಮೃತರು ಜಮಾಅತ್ ನ ಅಭಿಮಾನಿಯಾಗಿದ್ದರು. ಮೃತರಿಗೆ ಅಲ್ಲಾಹನು ಮಗ್ಫಿರತ್ ಮತ್ತು ಮರ್ಹಮತ್ ನೀಡಿ ಅನುಗ್ರಹಿಸಲಿ.