Home ಸುದ್ದಿ ಕೊಲ್ಕತ್ತಾ: ಸಾವಿರಾರು ಲೈಂಗಿಕ ಕಾರ್ಯಕರ್ತೆಯರಿಗೆ ಇಸ್ಲಾಮೀ ಸಂದೇಶ ಸಾರಿದ ಜಮಾಅತೆ ಇಸ್ಲಾಮಿ ಹಿಂದ್
ಕೊಲ್ಕತ್ತಾ: ಜಮಾಅತೆ ಇಸ್ಲಾಮೀ ಹಿಂದ್ ನ ಮಹಿಳಾ ವಿಭಾಗದ ವತಿಯಿಂದ ಇಸ್ಲಾಮೀ ಸಂದೇಶವನ್ನು ಸಾವಿರಾರು ಲೈಂಗಿಕ ಕಾರ್ಯಕರ್ತೆಯರಿಗೆ ನೀಡಿದ ಅಪೂರ್ವ ಘಟನೆಗೆ ಕೊಲ್ಕತ್ತಾ ಸಾಕ್ಷಿಯಾಯಿತ.
ಈ ಸಂದರ್ಭದಲ್ಲಿ ಲೈಂಗಿಕ ಕಾರ್ಯಕರ್ತೆಯರು ” ನಾವು ಇಸ್ಲಾಮಿಗೆ ಸಂಬಧಿಸಿದ ಈ ಪುಸ್ತಕಗಳನ್ನು ಓದಬಹುದೇ?” ಎಂದು ಪ್ರಶ್ನಿಸಿದ್ದರಲ್ಲದೇ; “ನಾವು ಪವಿತ್ರರಲ್ಲವೆಂದು ಜನರು ಹೇಳುವಾಗ ನಮಗೆ ಈ ಪುಸ್ತಕಗಳನ್ನು ಓದಬಹುದೇ?” ಎಂದು ಆಶ್ಚರ್ಯಕರವಾಗಿ ಪ್ರಶ್ನಿಸಿದ್ದರು.
ಈ ಪ್ರಶ್ನೆಗಳಿಗೆ ಪ್ರತಿಸ್ಪಂದಿಸಿದ ಜಮಾಅತೆ ಇಸ್ಲಾಮೀ ಹಿಂದ್ ನ ಕಾರ್ಯಕರ್ತರು ” ಇಸ್ಲಾಮಿಕ್ ಪುಸ್ತಕಗಳು ಒಬ್ಬ ವ್ಯಕ್ತಿಯನ್ನು ಶುದ್ಧ ವ್ಯಕ್ತಿತ್ವದತ್ತ ಆಕರ್ಷಿಸುವವುಗಳಾಗಿವೆ. ಇವುಗಳು ಮಾನವನರ ನೈಜ ಘನತೆ ಮತ್ತು ಗೌರವವನ್ನು ಎತ್ತಿಹಿಡಿಯುತ್ತವೆ. ಹಾಗಿರುವಾಗ ಪ್ರತಿಯೊಬ್ಬ ಮನುಷ್ಯನೂ ಕೂಡ ಇವುಗಳನ್ನು ಓದಲು ಅರ್ಹನು” ಎಂದುತ್ತರಿಸಿದರು.
ಪ್ರವಾದಿ ಮುಹಮ್ಮದ್ ರವರ (ಸ) ಜೀವನ ಸಂದೇಶವನ್ನು ನಗರದ ಗಲ್ಲಿಗಲ್ಲಿಗಳಲ್ಲಿ ಸಾರಲು ಈ ಕಾರವನವು ಒಂದು ವಾರದ ವರೆಗೆ ನಿಯುಕ್ತವಾಗಿದೆ. ಜನರಿಂದ ನಿಷೇಧಿಸಲ್ಪಟ್ಟ ಸೋನಾಗಚಿಯ ಪ್ರದೇಶಗಳಲ್ಲಿಯೂ ಕಾರವಾನವು ಪ್ರವಾದಿ(ಸ) ಜೀವನ ಸಂದೇಶವನ್ನು ಸಾರಿತು.
ಜಮಾಅತೆ ಇಸ್ಲಾಮೀ ಹಿಂದ್ ನ ಸದಬ್ ಮಾಸೂಮ್ ರವರು ಈ ಸಂದರ್ಭದಲ್ಲಿ ಟಿಎಇಎನ್ ವರ್ಲ್ಡ್ ಜೊತೆಗೆ ಮಾತನಾಡುತ್ತಾ” ಪ್ರಪ್ರಥಮ ಬಾರಿಗೆ ಒಂದು ಮುಸ್ಲಿಮ್ ಸಂಘಟನೆಯು ಲೈಂಗಿಕ ಕಾರ್ಯಕರ್ತರಿಗೆ ಇಸ್ಲಾಮಿನ ಸಂದೇಶವನ್ನು ಸಾರಲು ಮುಂದಡಿ ಇಟ್ಟಿತು. ಅಲ್ಲಿನ ಮಹಿಳೆಯರು ಇಸ್ಲಾಮನ್ನು ಅರಿಯಲು ಅತ್ಯುಸ್ತಕರಾಗಿದ್ದರು” ಎಂದರು.
“ಪ್ರವಾದಿ ಮುಹಮ್ಮದ್(ಸ) ಶಾಂತಿ ಸಂದೇಶವಾಹಕರು” ಎಂಬ ಶೀರ್ಷಿಕೆಯಡಿಯಲ್ಲಿ ಹಮ್ಮಿಕೊಳ್ಳಲಾದ ಕಾರವಾನವು ಕೊಲ್ಕತ್ತಾದ ಬಹುತೇಕ ಗಲ್ಲಿಗಳಲ್ಲಿ ಸಂಚರಿಸಿದ್ದು ಚಾಂದೀ, ವೆಲ್ಲಿಂಗ್ಟನ್, ಮೌಲಾಲಿ ಎಂಟಾಲಿ, ಪಾರ್ಕ್ ಸರ್ಕಸ್ ಮತ್ತು ಹಲವಾರು ಪ್ರದೇಶಗಳನ್ನು ಯಶಸ್ವಿಯಾಗಿ ತಲುಪಿದೆ. ಪ್ರವಾದಿ(ಸ) ವರ್ಯರ ಜೀವನ ಸಂದೇಶವನ್ನು ಸಾರುವುದು ಈ ಕಾರವಾನದ ಮುಖ್ಯ ಉದ್ದೇಶವೆಂಬುದಾಗಿ ಜಮಾಅತ್ ಟಿಡಿಎನ್ ವರ್ಲ್ಡ್ ಗೆ ತಿಳಿಸಿದೆ.