Home ಸುದ್ದಿ ಸೀರತ್ ಅಭಿಯಾನದ ಪ್ರಯುಕ್ತ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ
ಪ್ರವಾದಿ ಮುಹಮ್ಮದ್(ಸ) ಮಾನವಕುಲದ ಶ್ರೇಷ್ಠ ಮಾರ್ಗದರ್ಶಕ ಎಂಬ ಅಭಿಯಾನದ ಪ್ರಯುಕ್ತ ಶಿಕ್ಷಕರಿಗಾಗಿ “ಪ್ರವಾದಿ ಮುಹಮ್ಮದ್ (ಸ) ನನ್ನ ದ್ರಷ್ಟಿಯಲ್ಲಿ” ಎಂಬ ವಿಷಯದಲ್ಲಿ ದ.ಕ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಪ್ರಥಮ ಬಹುಮಾನ 25,000 ನಗದು ಮತ್ತು ಪ್ರಮಾಣ ಪತ್ರ ದ್ವಿತೀಯ ಬಹುಮಾನ 15,000 ನಗದು ಮತ್ತು ಪ್ರಮಾಣಪತ್ರ ತೃತೀಯ ಬಹುಮಾನ 10,000 ನಗದು ಮತ್ತು ಪ್ರಮಾಣ ಪತ್ರ ಹಾಗೂ ಹತ್ತು ಮಂದಿ ವಿಜೇತರಿಗೆ ಸಮಾಧಾನಕರವಾಗಿ 2,000 ನಗದು ಮತ್ತು ಪ್ರಮಾಣ ಪತ್ರ ನೀಡಲಾಗುವುದು. ಸರ್ವಧರ್ಮೀಯರೂ ಜಾತಿ ಬೇಧವಿಲ್ಲದೆ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಪ್ರಬಂಧವು ಬಿಳಿ ಫುಲ್ ಸ್ಕೇಪ್ ಹಾಳೆಯ ಒಂದೇ ಮಗ್ಗುಲಲ್ಲಿ ಕನಿಷ್ಟ ಎಂಟು ಪುಟವಾದರೂ ಇರಬೇಕು. ಕನ್ನಡಕ್ಕೆ ಮೊದಲ
ಆದ್ಯತೆ. ಪ್ರತೀ ಸ್ಪರ್ಧಿಗೂ ಪ್ರಮಾಣ ಪತ್ರ ನೀಡಲಾಗುತ್ತದೆ. ಬಹುಮಾನ ಪಡೆದ ಶಿಕ್ಷಕರ ಶಾಲಾಕಾಲೇಜುಗಳಿಗೂ ಫಲಕ ನೀಡಲಾಗುವುದು. ಪ್ರತೀ ಸ್ಪರ್ದಿಯೂ ಆಯಾ ಶಾಲೆ/ಕಾಲೇಜಿನ ಮೊಹರು ಮತ್ತು ಪ್ರಾಂಶುಪಾಲರ ಸಹಿಯೊಂದಿಗೆ ದೃಢೀಕರಿಸಿ ಡಿಸೆಂಬರ್ ಹದಿನೈದರೊಳಗೆ ತಲುಪುವಂತೆ ಮುಖತಃ ಅಂಚೆ ಕೊರಿಯರ್ ಮುಖಾಂತರ ಕಳುಹಿಸತಕ್ಕದ್ದು.ಲಕೋಟೆಯ ಮೇಲೆ ಸೀರತ್ ಪ್ರಬಂಧ ಸ್ಪರ್ಧೆ ಎಂದು ನಮೂದಿಸಬೇಕು.
ನಮ್ಮ ವಿಳಾಸ: ಸ್ವಾಗತ ಸಮಿತಿ, ಪ್ರವಾದಿ ಮುಹಮ್ಮದ್ (ಸ)ಸೀರತ್ ಅಭಿಯಾನ, ಹಿದಾಯತ್ ಸೆಂಟರ್, ಬೀಬಿ ಅಲಾಬಿ ರಸ್ತೆ, ಬಂದರ್, ಮಂಗಳೂರು: 575001
ಮೊಬೈಲ್ ಸಂಖ್ಯೆ :9141500811
9449333496
9448696490