ಜಾಮೀನು ನೀಡಿದ್ದ ವಿದ್ಯಾರ್ಥಿ ಹೋರಾಟಗಾರರನ್ನು ಬಿಡುಗಡೆ ಮಾಡುವಂತೆ ದೆಹಲಿ ನ್ಯಾಯಾಲಯ ಆದೇಶ

0
537

ಸನ್ಮಾರ್ಗ ವಾರ್ತೆ

ದೆಹಲಿ: 2020ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ 36 ಗಂಟೆಗಳ ಹಿಂದೆ ಜಾಮೀನು ಪಡೆದ ಮೂವರು ವಿದ್ಯಾರ್ಥಿ ಹೋರಾಟಗಾರರನ್ನು ತಕ್ಷಣ ಬಿಡುಗಡೆ ಮಾಡಲು ದೆಹಲಿ ದೆಹಲಿ ಹೈಕೋರ್ಟ್ ಗುರುವಾರ ಆದೇಶಿಸಿದೆ. 2 ದಿನಗಳ ಹಿಂದೆ ಈ ವಿದ್ಯಾರ್ಥಿಗಳಿಗೆ ಜಾಮೀನು ಸಿಕ್ಕಿದ್ದರೂ ಬಿಡುಗಡೆ ಆದೇಶ ತಡೆ ಹಿಡಿದ ಕಾರಣ ಅವರು ಜೈಲಿನಲ್ಲಿಯೇ ಇರಬೇಕಾಗಿ ಬಂದಿದೆ .

ಪಿಂಜ್ರಾ ತೋಡ್ ಕಾರ್ಯಕರ್ತರಾದ ನತಾಶಾ ನರ್ವಾಲ್ ಮತ್ತು ದೇವಂಗನ ಕಲಿತಾ ಮತ್ತು ಆಸಿಫ್ ಇಕ್ಬಾಲ್ ತನ್ಹಾ ಅವರನ್ನು ಕಳೆದ ವರ್ಷ ದೆಹಲಿ ಗಲಭೆಯಲ್ಲಿ ಪಾತ್ರವಹಿಸಿದ್ದಾರೆಂಬ ಆರೋಪ ಹೊರಿಸಿ ಯುಎಪಿಎ ಮತ್ತು ಭಯೋತ್ಪಾದನಾ ವಿರೋಧಿ ಕಾನೂನಿನಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರವೀಂದರ್ ಬೇಡಿ ಅವರು ಬೆಳಿಗ್ಗೆ 11 ಗಂಟೆಗೆ ಬಿಡುಗಡೆ ವಾರಂಟ್ ಹೊರಡಿಸಿದ್ದಾರೆ. ಅದೇ ಸಮಯದಲ್ಲಿ, ಮೂವರು ಅರ್ಜಿದಾರರ ಪರ ವಕೀಲರು ದೆಹಲಿ ಹೈಕೋರ್ಟ್ ಮುಂದೆ ತಕ್ಷಣ ಬಿಡುಗಡೆಗಾಗಿ ವಾದಿಸಿದರು. ವಿಚಾರಣಾ ನ್ಯಾಯಾಲಯವು ವಿಚಾರಣೆಯನ್ನು ತ್ವರಿತಗೊಳಿಸಬೇಕು ಎಂದು ದೆಹಲಿ ಹೈಕೋರ್ಟ್ ಹೇಳಿತ್ತು.

ತನಿಖಾಧಿಕಾರಿ ಕಳುಹಿಸಿದ ವಿವರಗಳ ಪ್ರಕಾರ ಸಹ ಶ್ಯೂರಿಟಿಗಳ ಕನಿಷ್ಠ ಪರಿಶೀಲನಾ ಪ್ರಕ್ರಿಯು ನಿನ್ನೆ ಮಧ್ಯಾಹ್ನ 1: 00 ರೊಳಗೆ ಸಲ್ಲಿಸಬೇಕು ಎಂದು ನಾನು ಗಮನಿಸಿದ್ದೇನೆ. ಎಲ್ಲಾ ಜಾಮೀನುದಾರರು ದೆಹಲಿಯ ನಿವಾಸಿಗಳಾಗಿರಬೇಕು. ಆರೋಪಿಗಳ ಖಾಯಂ ವಿಳಾಸದ ಪರಿಶೀಲನೆಗೆ ಸಮಯ ಬೇಕಾಗುತ್ತದೆ ಎಂದು ತನಿಖಾಧಿಕಾರಿ ಹೇಳಿದ್ದಾರೆ. ಅಂತಹ ವರದಿಗಳನ್ನು ಸಲ್ಲಿಸುವ ಸಮಯದವರೆಗೆ ಆರೋಪಿಗಳನ್ನು ಜೈಲಿನಲ್ಲಿಡಲು ಸಮರ್ಥ ಕಾರಣವಲ್ಲ ಎಂದು ನಾನು ಹೇಳುತ್ತೇನೆ ಎಂದು ರವೀಂದರ್ ಬೇಡಿ ಆದೇಶದಲ್ಲಿ ಹೇಳಿದ್ದಾರೆ.

ಪರಿಶೀಲನೆ ಪ್ರಕ್ರಿಯೆಗೆ ಸ್ವಲ್ಪ ಸಮಯ ಬೇಕಾಗುವುದರಿಂದ, ಈ ಕುರಿತು ವರದಿಯನ್ನು ತನಿಖಾಧಿಕಾರಿ ಜೂನ್ 23 ರಂದು ಅಥವಾ ಅದಕ್ಕೂ ಮೊದಲು ಮಧ್ಯಾಹ್ನ 2: 30 ಕ್ಕೆ ಸಂಬಂಧಪಟ್ಟ ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ಆರೋಪಿಗಳ ವಿಳಾಸವನ್ನು ಪರಿಶೀಲಿಸಿ ಗುರುವಾರ ಸಂಜೆ 5 ಗಂಟೆಗೆ ಸಲ್ಲಿಸುವಂತೆ ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ.

ಬುಧವಾರ ಬೇಡಿ ಅವರು ತಕ್ಷಣದ ಬಿಡುಗಡೆಯ ಆದೇಶವನ್ನು ಅಂಗೀಕರಿಸುವುದನ್ನು ಮುಂದೂಡಿದ್ದರು, ಮೂವರು ಆರೋಪಿಗಳು ತಕ್ಷಣ ತಮ್ಮನ್ನು ಬಿಡುಗಡೆ ಮಾಡುವಂತೆ ಹೈಕೋರ್ಟ್‌ನನ್ನು ಸಂಪರ್ಕಿಸಿದ್ದರು.