ಅಲ್ಲಾಹ್ ಎಂಬ ಪದಕ್ಕೆ ಅದ್ಭುತವಾದಂತಹ ವ್ಯಾಖ್ಯಾನ

0
1550

ಲೇಖನ: ರೈಹಾನ ವಿ. ಕೆ. ಸಚೇರಿಪೇಟೆ

ಅಲ್ಲಾಹ್ ಎಂಬ ಪದಕ್ಕೆ ವ್ಯಾಖ್ಯಾನ ನೀಡಿದ ಹೆಲೆನ್ ಇಸ್ಲಾಂ ಧರ್ಮ ಸ್ವೀಕರಿಸಿದರು. ಅರಬೀ ಜನರಿಂದಲೂ ವ್ಯಾಖ್ಯಾನಿಸಲು ಅಸಾಧ್ಯ ವಾದಂತಹ ಅಲ್ಲಾಹ್ ಎಂಬ ಜಲಾಲತ್ ನ ಪದಕ್ಕೆ ಸ್ಪಾನಿಷ್ ನ ಹೆಣ್ಣು ಮಗಳು ನೀಡಿರುವ ವ್ಯಾಖ್ಯಾನ ನಿಜಕ್ಕೂ ಅತ್ಯದ್ಭುತ .

ಆಕೆ ಹೇಳುತ್ತಾಳೆ: ಅರಬೀ ಭಾಷೆಯಲ್ಲಿ ನನಗೆ ಅತೀ ಹೆಚ್ಚು ಮೆಚ್ಚುಗೆಯಾದ ಪದ ಅಲ್ಲಾಹ್(الله) ಎಂಬ ಪದವಾಗಿದೆ. ಈ ಶಬ್ಧವನ್ನು ಮನುಷ್ಯನು ಉಚ್ಛರಿಸುವಾಗ ಅನನ್ಯ ಮಾಧುರ್ಯವಿದೆ. ಇದರಲ್ಲಿ ಅಡಕವಾಗಿರುವ ಅ ಲ ಹ (ا ل ه) ಎಂಬೀ ಮೂರು ಅಕ್ಷರಗಳನ್ನು ಉಚ್ಛರಿಸುವಾಗ ತುಟಿಯನ್ನು ಬಳಸಲಾಗುದಿಲ್ಲ. ಅಂದರೆ ಅಲ್ಲಾಹ್ ಎಂಬ ಶಬ್ಧವನ್ನು ಉಚ್ಛರಿಸುವಾಗ ತುಟಿಯ ಅಗತ್ಯ ವಿಲ್ಲ. ಈ ಶಬ್ದವನ್ನು ಉಚ್ಛರಿಸುವಾಗ ಮುಖದ ಚಲನೆ ಕೂಡಾ ಉಂಟಾಗುವುದಿಲ್ಲ. ಅದು ಗಂಟಲಿನ ಒಳಗಿನಿಂದ ಹೊರಡುವ ಶಬ್ದ. ಇದರಿಂದ ಅರ್ಥವಾಗುವುದೇನೆಂದರೆ ಒಂದು ಸಭೆಯಲ್ಲಿ ಅಥವಾ ಒಂದು ಗುಂಪಿನಲ್ಲಿ ಯಾರಾದರೂ ಅಲ್ಲಾಹ್ ಎಂದು ಉಚ್ಛರಿಸಿದಾಗ, ಅದನ್ನು ಬೇರೆ ಯಾರಿಂದಲೂ ತಿಳಿಯಲು ಸಾಧ್ಯವಿಲ್ಲ.
ಇನ್ನೊಂದು ಅಧ್ಭುತ ವೇನಂದರೆ ಅಲ್ಲಾಹ್ ಎಂಬ ಶಬ್ದದ ಮೊದಲನೇ ಅಕ್ಷರವನ್ನು ಕಳೆದುಕೊಂಡಾಗ (ಅ)ಲಿಲ್ಲಾಹಿ (لله) ಅರ್ಥಾತ್ ‘ಅಲ್ಲಾಹನಿಗೆ’ ಎಂಬ ಅರ್ಥ ಲಭಿಸುತ್ತದೆ. ಅಲ್ಲಾಹನು ಹೇಳುತ್ತಾನೆ.

ولله الاسماء الحسنى

ಅರ್ಥಾತ್ ಅಲ್ಲಾಹನಿಗೆ ಅತ್ಯುತ್ತಮ ನಾಮಗಳಿವೆ.
ಇನ್ನೂ ಇದರಿಂದ ಒಂದು ಅಕ್ಷರ ಕಳೆದರೆ (له ) ಲಹು ಅರ್ಥಾತ್ “ಅವನಿಗೆ”
له ما في السماوات والأرض
ಅರ್ಥಾತ್ “ಆಕಾಶ ಭೂಮಿಗಳೆಲ್ಲವೂ ಅವನಿಗಿರುವುದಾಗಿದೆ.”
ಇನ್ನೂ ಇದರಿಂದ ಒಂದಕ್ಷರ ಲೋಪವಾದರೆ ಹು( ه) ಎಂಬ ಶಬ್ದ ದೊರೆಯುತ್ತದೆ.
ಅಲ್ಲಾಹನು ಹೇಳುತ್ತಾನೆ:
هو الذي لا إله إلا هو
ಅರ್ಥಾತ್ “ಅವನಲ್ಲದೆ ಬೇರೆ ಆರಾಧ್ಯನಿಲ್ಲ.”
ಅಧ್ಭುತವೇನೆಂದರೆ
لا إله إلا الله
ಎಂಬ ಸತ್ಯ ಸಾಕ್ಷ್ಯ ದ ಈ ವಚನದಲ್ಲಿ ಈ ಮೂರೂ ಅಕ್ಷರಗಳನ್ನು (ಅಲಿಫ್ ಲಾಮ್ ಹ) ಮಾತ್ರ ಬಳಸಲಾಗಿದೆ. ಇದು ಅರಬಿಕ್ ಅಕ್ಷರ ಮಾಲೆಯ ಲೈಟ್ ಲೆಟರ್ಸ್ (ಲಘು ಅಕ್ಷರ) ಗಳ ಗುಂಪಿಗೆ ಸೇರಿದ ಅಕ್ಷರಗಳು.
ಅಲ್ಲಾಹನು ಈ ಅಕ್ಷರಗಳನ್ನು ಬಳಸಿರುವ ಯುಕ್ತಿ ಇಲ್ಲಿ ಗಮನಾರ್ಹ. ಮರಣಾಸನ್ನನಾದ ಒಬ್ಬ ವ್ಯಕ್ತಿಗೆ ನಾಲಗೆ ಮತ್ತು ತುಟಿಯ ಚಲನೆ ಸಾಧ್ಯವಿಲ್ಲ ದಾಗಲೂ ಸತ್ಯ ಸಾಕ್ಷ್ಯದ ಈ ವಚನವನ್ನು ಉಚ್ಛರಿಸಬಹುದಾಗಿದೆ.
ಇನ್ನೊಮ್ಮೆ ಜೋರಾಗಿ ಮೊಳಗಲಿ ಅದ್ಭುತವಾದಂತಹ ಈ ವಚನ. “ಲಾ ಇಲಾಹ ಇಲ್ಲಲ್ಲಾಹ್ “