ಸನ್ಮಾರ್ಗ ವಾರ್ತೆ
ವಾಷಿಂಗ್ಟನ್: ಅಧ್ಯಯನವೊಂದರ ಪ್ರಕಾರ ಚೀನಾದ ಲ್ಯಾಬ್ನಿಂದಲೇ ಕೊರೋನ ವೈರಸ್ ಜಗತ್ತಿನಾದ್ಯಂತ ಹಬ್ಬಿದೆ ಎಂದು ಅಮೆರಿಕದ ಶೇ. 60ರಷ್ಟು ಮಂದಿ ನಂಬಿಕೆಯಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಮೀಡಿಯ ಪೋಲ್ ಸರ್ವೆಯಲ್ಲಿ ಚೀನಾದ ವುಹಾನ್ ಲ್ಯಾಬ್ನಿಂದ ಕೊರೋನ ವೈರಸ್ ಸೋರಿಕೆಯಾಗಿದೆ ಎಂದು ಜನರಲ್ಲಿ ನಂಬಿಕೆಯಿದೆ ಎಂದು ತಿಳಿದು ಬಂದಿದೆ.
ಫಾಕ್ಸ್ ನ್ಯೂಸ್ ಸಮೀಕ್ಷೆ ನಡೆಸಿದ್ದು ಜೂನ್ 19ರಿಂದ ಜೂನ್ 22ರವರೆಗೆ 1001 ಅಮೆರಿಕನ್ ಪ್ರಜೆಗಳಲ್ಲಿ ಈ ಸಮೀಕ್ಷೆ ನಡೆದಿತ್ತು. ಶೇ.31ರಷ್ಟು ಅಮೆರಿಕನ್ ಪ್ರಜೆಗಳು ಕೊರೊನ ಸಹಜವಾಗಿ ಉದ್ಭವಿಸಿದೆ ಎಂದಿದ್ದಾರೆ.
ಲ್ಯಾಬ್ನಿಂದ ಹರಡಿದ್ದೆಂದು ಇದ್ದ ಅನುಮಾನಗಳನ್ನು ವಿಶ್ವಾರೋಗ್ಯ ಸಂಘಟನೆ ಈ ವರ್ಷದ ಫೆಬ್ರುವರಿಯಲ್ಲಿಯೇ ನಿರಾಕರಿಸಿತ್ತು. ಈ ವಾದವನ್ನು ದೃಢೀಕರಿಸಬಲ್ಲ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ ಎಂದು ವಿಶ್ವಾರೋಗ್ಯ ಸಂಘಟನೆಯ 17 ಮಂದಿ ಸದಸ್ಯರ ತಂಡ ಘೋಷಿಸಿತ್ತು. ಅಂದರೆ ಚೀನದಿಂದ ಇದಕ್ಕೆ ಬೇಕಾದ ಪುರಾವೆಗಳಾಗಲಿ ಸ್ಯಾಂಪಲ್ಗಳಾಗಲಿ ಸಿಗುವ ಸಾಧ್ಯತೆ ಇಲ್ಲ ಎಂದು ವಿಶ್ವಾರೋಗ್ಯ ಸಂಘಟನೆಯ ವಾದವಾಗಿದೆ. ಅಮೆರಿಕ, ಇಂಗ್ಲೆಂಡ್ ಈ ವಾದವನ್ನು ಒಪ್ಪಿಕೊಂಡಿಲ್ಲ.












