ಸನ್ಮಾರ್ಗ ವಾರ್ತೆ
ಭೋಪಾಲ: ಕೊರೊನ ವೈರಸ್ನಲ್ಲಿ ತೀವ್ರ ಹರಡುವಿಕೆಯನ್ನು ಹೊಂದಿರುವ ರೂಪಾಂತರವಾದ ಡೆಲ್ಟಾ ಪ್ಲಸ್ನಲ್ಲಿ ಮೊದಲ ಸಾವು ಮಧ್ಯಪ್ರದೇಶದಲ್ಲಿ ನಡೆದಿದೆಯೆಂದು ದೃಢೀಕರಿಸಲಾಗಿದ್ದು ಉಜ್ಜೈನಿಯಲ್ಲಿ ಮೇ 23ಕ್ಕೆ ಕೊರೋನದಿಂದ ಮೃತಪಟ್ಟ ವ್ಯಕ್ತಿಯ ಸ್ಯಾಂಪಲ್ನಲ್ಲಿ ಡೆಲ್ಟಾ ವೈರಾಣು ಪತ್ತೆಯಾಗಿದೆ. ಇದೇ ವೇಳೆ ಡೆಲ್ಟಾಪ್ಲಸ್ಗೆ ಅತೀಶೀಘ್ರ ಹರಡುವ ಗುಣವಿದೆಯೆಂದೂ ಎಚ್ಚರಿಕೆ ನೀಡಲಾಗಿದೆ.
ಮಧ್ಯಪ್ರದೇಶದಲ್ಲಿ ಐವರಲ್ಲಿ ಡೆಲ್ಟಾ ಪ್ಲಸ್ ಕಂಡುಬಂದಿದೆ. ಮೂವರು ಭೋಪಾಲದಲ್ಲಿಯೂ ಇಬ್ಬರು ಉಜ್ಜೈನಿಯಲ್ಲಿಯ ವ್ಯಕ್ತಿಗಳಾಗಿದ್ದು ಇವರಲ್ಲಿ ಮೃತ ವ್ಯಕ್ತಿಯನ್ನು ಹೊರತು ಪಡಿಸಿ ಉಳಿದ ನಾಲ್ವರು ರೋಗದಿಂದ ಗುಣಮುಖರಾಗಿದ್ದಾರೆ.
ಮೃತ ವ್ಯಕ್ತಿಯ ಸಂಪರ್ಕದಲ್ಲಿದ್ದ ಜನರನ್ನು ಗುರುತಿಸುವುದು ಸಹಿತ ಪ್ರತಿರೋಧ ಚಟುವಟಿಕೆಗಳು ಮುಂದುವರಿದಿದ್ದು ಮಧ್ಯಪ್ರದೇಶ ಆರೋಗ್ಯ ಸಚಿವರು ಹೇಳಿರುವ ಪ್ರಕಾರ ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ನಿರೀಕ್ಷಿಸಲಾಗುತ್ತಿದೆ. ರೂಪಾಂತರದ ಶ್ರೇಣಿಯನ್ನು ಗುರುತಿಸುವ ಕಾರ್ಯವು ನಡೆಯುತ್ತಿದೆ ಎಂದು ಅವರು ಹೇಳಿದರು.
ಡೆಲ್ಟಾದಿಂದ ಗುಣಹೊಂದಿದ ನಾಲ್ವರು ವ್ಯಾಕ್ಸಿನ್ ಪಡೆದುಕೊಂಡವರು ಎಂದು ಸಚಿವರು ಹೇಳಿದರು. ಆದರೆ, ಮೃತ ವ್ಯಕ್ತಿ ವ್ಯಾಕ್ಸಿನ್ ಸ್ವೀಕರಿಸಿರಲಿಲ್ಲ. ಡೆಲ್ಟಾ ಪ್ಲಸ್ ವೈರಸ್ ವಿರುದ್ಧ ಎಚ್ಚರ ವಹಿಸಬೇಕೆಂದು ಕೇಂದ್ರ ಸರಕಾರ ರಾಜ್ಯ ಸರಕಾರಗಳಿಗೆ ಸೂಚನೆ ನೀಡಿದೆ. ಮಹಾರಾಷ್ಟ್ರ, ಕೇರಳಗಳಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ಪ್ರಕರಣಗಳು ದೃಢಪಟ್ಟಿದ್ದು ತಮಿಳ್ನಾಡಿನಲ್ಲಿ ಒಬ್ಬರಲ್ಲಿ ವೈರಸ್ ಕಂಡು ಬಂದಿದೆ.












