ಯುವತಿಗೆ ಬೆದರಿಕೆಯೊಡ್ಡಿ ನಾಲ್ಕು ವರ್ಷದಿಂದ ಅತ್ಯಾಚಾರ: ಉತ್ತರ ಪ್ರದೇಶ ಬಿಜೆಪಿ ನಾಯಕನ ಬಂಧನ

0
2247

ಸನ್ಮಾರ್ಗ ವಾರ್ತೆ

ಲಕ್ನೋ: ಯುವತಿಯೊಬ್ಬಳಿಗೆ ಬೆದರಿಕೆಯೊಡ್ಡಿ ನಾಲ್ಕು ವರ್ಷಗಳಿಂದ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಬಿಜೆಪಿ ನಾಯಕನೋರ್ವನನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.

ಬಲಿಯದ ಬಿಜೆಪಿ ಬೂತ್ ಅಧ್ಯಕ್ಷ ಬ್ರಿಜ್ ಮೋಹನ್ ಪಾಂಡೆ(30) ಆತ್ಯಾಚಾರ ಆರೋಪಿಯಾಗಿದ್ದು, ಸದ್ಯ ಪೊಲೀಸರ‌‌ ಅತಿಥಿಯಾಗಿದ್ದಾನೆ.

23 ವರ್ಷದ ಯುವತಿಯನ್ನು ಈತ ನಿರಂತರ ಅತ್ಯಾಚಾರಕ್ಕೀಡು ಮಾಡುತ್ತಿದ್ದನು. ಹೊರಗೇನಾದರೂ ಹೇಳಿದರೆ ಕೊಂದು ಹಾಕುವೆ ಎಂದು ಬೆದರಿಕೆಯೊಡ್ಡಿದ್ದ. ಯುವತಿಯೊಂದಿಗಿನ ಕ್ಷಣಗಳನ್ನು ವೀಡಿಯೊ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡಿ ಯುವತಿ ನಿಶ್ಚಯಿಸಿಕೊಂಡಿದ್ದ ಮದುವೆಯನ್ನು ಈತ ಈ ರೀತಿ ತಡೆದಿದ್ದಾನೆ ಎಂದು ಯುವತಿ ತಿಳಿಸಿದ್ದಾಳೆ. ನಂತರ ಯುವತಿ ದೂರು ನೀಡಿದ್ದು ಗದ್ವಾರ ಪೊಲೀಸರು ಕೇಸು ದಾಖಲಿಸಿ, ಆರೋಪಿಯನ್ನು ಬಂಧಿಸಿದ್ದಾರೆ.