ದುಬೈ ಪ್ರಯಾಣ ನಿರ್ಬಂಧ ಯಾವಾಗ ತೆರವುಗೊಳ್ಳಬಹುದೆಂಬ ಬಗ್ಗೆ ಇಲ್ಲ ಇನ್ನೂ ಖಾತರಿ: ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಿದರೆ ಹಣ ನಷ್ಟ

0
724

ಸನ್ಮಾರ್ಗ ವಾರ್ತೆ

ನವದೆಹಲಿ: ದುಬೈ ವಿಮಾನ ಪ್ರಯಾಣಕ್ಕೆ ವಿಧಿಸಲಾಗಿರುವ ನಿರ್ಬಂಧವನ್ನು ತೆರವುಗೊಳಿಸುವುದಕ್ಕಾಗಿ ಭಾರತೀಯರು ಕಾಯುತ್ತಿದ್ದಾರೆ. ಹೇಗಾದರೂ ಮಾಡಿ ದುಬೈಗೆ ತಲುಪಬೇಕು ಎಂಬುದು ಅವರೆಲ್ಲರ ಆಗ್ರಹ. ಆದರೆ ಇಂತಹ ಅತಿಯಾದ ಆವೇಶವು ನಿಮ್ಮ ಹಣಕ್ಕೆ ಕುತ್ತು ತರುವ ಸಾಧ್ಯತೆ ಇದೆ. ವಿಮಾನ ಪ್ರಯಾಣ ನಿರ್ಬಂಧ ತೆರವುಗೊಳ್ಳದೇ ಟಿಕೆಟ್ ಬುಕ್ಕಿಂಗ್ ಮಾಡುವುದರಿಂದ ಅಪಾಯವಿದೆ ಎಂದು ಎಚ್ಚರಿಸಲಾಗಿದೆ.

ನಿರ್ಬಂಧ ಯಾವಾಗ ತೆರವುಗೊಳ್ಳಬಹುದು ಎಂಬುದು ಖಾತರಿ ಇಲ್ಲದೆಯೇ ಟಿಕೆಟ್ ಬುಕಿಂಗ್ ಮಾಡಿ ಬಳಿಕ ಅವಧಿ ಮುಗಿದರೆ ಟಿಕೆಟಿನ ಹಣ ನಷ್ಟವಾಗುತ್ತದೆ. ಭಾರತೀಯರಿಗೆ ಯುಏಇ ಪ್ರಯಾಣಕ್ಕೆ ಅನಿರ್ದಿಷ್ಟಾವಧಿ ನಿರ್ಬಂಧವಿದೆ.

ಜುಲೈ ಮೊದಲ ವಾರದಲ್ಲಿ
ವಿಮಾನ ನಿರ್ಬಂಧ ತೆರವು ಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.ಆದರೆ ಏರ್ಲೈನ್ ಗಳು ಈ ಬಗ್ಗೆ ಖಚಿತವಾಗಿ ಏನನ್ನೂ ಹೇಳಿಲ್ಲ. ಇದೇ ವೇಳೆ ಜುಲೈ 1 ರಿಂದ ಟಿಕೆಟ್ ಲಭ್ಯವಿರಲಿದೆ.
ಏರ್ಲೈನ್ ಗಳ ವೆಬ್ಸೈಟ್ ನ ಮೂಲಕ ಅಥವಾ ಏಜೆನ್ಸಿಗಳ ಮೂಲಕವೂ ಟಿಕೆಟ್ ಬುಕ್ ಮಾಡಬಹುದು. ಟಿಕೆಟ್ ಬುಕ್ಕಿಂಗ್ ಮಾಡಿದ ಬಳಿಕ ಸಮಯಕ್ಕೆ ಸರಿಯಾಗಿ ವಿಮಾನ ಸೇವೆ ಪುನರಾರಂಭಗೊಳ್ಳದಿದ್ದರೆ ಈ ಟಿಕೆಟ್ ಹಣ ನಷ್ಟವಾಗಲಿದೆ. ಹೆಚ್ಚಿನ ಏರ್ಲೈನ್ ಗಳು
ರೀಫಂಡ್ ಮಾಡುವುದಿಲ್ಲ. ಈ ವಿಷಯ ಅವುಗಳ ವೆಬ್ಸೈಟ್ನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಆದರೆ ಹೆಚ್ಚಿನವರು ಇದನ್ನು ಗಮನಿಸದೆ ಟಿಕೆಟ್ ಬುಕಿಂಗ್ ಮಾಡುತ್ತಿದ್ದಾರೆ. ರಿಫಂಡ್ ಮಾಡದಿದ್ದರೆ ಇನ್ನೊಂದು ದಿವಸ ವಿಮಾನ ಪ್ರಯಾಣಕ್ಕೆ ಅನುಮತಿ ನೀಡುವುದಿದೆ. ಆದರೆ ಹೆಚ್ಚಿನವರಿಗೆ ಆ ಇನ್ನೊಂದು ದಿನದಲ್ಲಿ ಪ್ರಯಾಣಿಸುವುದಕ್ಕೆ ಸಾಧ್ಯ ಎಂದು ಹೇಳುವ ಹಾಗಿಲ್ಲ. ಟಿಕೆಟ್ ಬುಕಿಂಗ್ ಪ್ರಾರಂಭವಾಗಿದೆ ಎಂಬ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಯಾಗುತ್ತಿರುವ ಸ್ಕ್ರೀನ್ ಶಾಟ್ ಗಳಿಂದ ಯಾರೂ ಮೋಸ ಹೋಗಬಾರದು ಎಂದು ಎಚ್ಚರಿಸಲಾಗಿದೆ.‌