ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಜಗತ್ತು ಕಾದಿರುವ ಒಲಿಂಪಿಕ್ಸ್ ಗೆ ಜುಲೈ 23ಕ್ಕೆ ಟೋಕಿಯೊದಲ್ಲಿ ಜ್ಯೋತಿ ಉರಿಸಲಾಗುತ್ತಿದ್ದು, ಆಟಗಾರರು ಮತ್ತು ವ್ಯವಸ್ಥೆಯ ವಿಶೇಷಗಳು ಸಾಮಾಜಿಕ ಜಾಲ ತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಕಳೆದ ವರ್ಷ ನಡೆಯಬೇಕಿದ್ದ ಒಲಿಂಪಿಕ್ಸ್ ಕೊರೋನದಿಂದ ಒಂದು ವರ್ಷ ಮುಂದಕ್ಕೆ ಹೋಗಿತ್ತು. ಆದರೆ ಭಾರತದಲ್ಲಿ ಹೊಸ ಒಲಿಂಪಿಕ್ ಪದಕವೊಂದು ಚರ್ಚೆಯಾಗುತ್ತಿದೆ.
ಒಲಿಂಪಿಕ್ಸ್ನಲ್ಲಿ ಸ್ವಯಂಸೇವಕರಾಗಿ ಪಾಲ್ಗೊಳ್ಳುವವರಿಗೆ ‘ಸ್ವಯಂಸೇವಕ್ ‘ ಪದ ಎಂಬ ಹಿಂದಿಯಲ್ಲಿ ಮುದ್ರಿಸಿದ ಪದಕವನ್ನು ನೀಡಲಾವುದು ಎಂದು ಕೆಲವರು ಹೇಳುತ್ತಿದ್ದಾರೆ. ಜೊತೆಗೆ ಪದಕದ ಚಿತ್ರವನ್ನು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಪದಕದ ಫೋಟೋವನ್ನು ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಡಾ. ನರೀಂದರ್ ಧ್ರುವ್ ಬತ್ರರಿಗೂ ಶೇರ್ ಮಾಡಿಬಿಟ್ಟಿದ್ದಾರೆ.
ಬತ್ರ ರವರ ಗಮನಕ್ಕೆ ಬಂದ ನಂತರ ಚಿತ್ರವನ್ನು ಶೇರ್ ಮಾಡಿ ಹೀಗೆ ಬರೆದಿದ್ದಾರೆ. ಹನ್ನೊಂದು ಭಾಷೆಯಲ್ಲಿ ವಾಲೆಂಟಿಯರ್ ಎಂಬ ಪದವನ್ನು ಬರೆದಿದ್ದು ಈ ಸಾಲಿನಲ್ಲಿ ಹಿಂದಿಗೂ ಅವಕಾಶ ಸಿಕ್ಕಿದೆ ಎಂದು ಇವರು ಹೇಳುತ್ತಾರೆ. ಹಿಂದಿಗೆ ಸಿಕ್ಕಿದ ಪರಿಗಣನೆಗಿಂತ ಸ್ವಯಂಸೇವಕ್ ಎಂಬ ಪದದ ರಾಜಕೀಯವು ಇವರನ್ನು ಅವೇಶಭರಿತ ಗೊಳಿಸಿದ್ದು. ಆದ್ದರಿಂದ ಪದಕದ ಚಿತ್ರ ಹಿಂದೆ ಮುಂದೆ ನೋಡದೆ ಶೇರ್ ಮಾಡಿದ್ದಾರೆ. ಅದರ ಕೆಳಗೆ ಟ್ಯಾಗ್ಲೈನ್ನಲ್ಲಿ ತಮ್ಮ ವಿರೋಧಿಗಳ ಮುಖ ಅಂದಗೆಡಲಿದೆ ಎಂದು ಕೂಡ ಟ್ಯಾಗ್ ಲೈನ್ ಹಾಕಿದ್ದಾರೆ.
ಕೆಲವರು ಒಲಿಂಪಿಕ್ ಸಂಘಟಕ ಸಮಿತಿಗೆ ಇಮೇಲ್ ಕಳುಹಿಸಿ ವಿವರ ಕೇಳಿದರು. ಒಲಿಂಪಿಕ್ ಸಂಘಟಕರು ಇಂತಹದೊಂದು ಪದಕ ಇರುವ ವಿಷಯ ನಮಗೆ ಗೊತ್ತಿಲ್ಲ ಎಂದು ಉತ್ತರ ಬಂದಿದೆ. ಇಂಟರ್ನ್ಯಾಶನಲ್ ಒಲಿಂಪಿಕ್ಸ್ ಕಮಿಟಿ ಇದುವರೆಗೆ ಇಂಥ ಮೆಡಲ್ಗಳನ್ನು ಪರಿಚಯಿಸಿಲ್ಲ ಎಂದು ಸುಳ್ಳುಸುದ್ದಿಯನ್ನು ಪತ್ತೆ ಹಚ್ಚುವ ವೆಬ್ ಸೈಟ್ ಗುರುತಿಸಿ ದೃಢೀಕರಿಸಿವೆ.
ಕೆಲವು ಇಕಾಮರ್ಸ್ ವೆಬ್ಸೈಟ್ ಗಳಲ್ಲಿ ಇದು ಕಾಣಿಸುತ್ತಿವೆ. ಒಲಿಂಪಿಕ್ ಕಮಿಟಿಗೆ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ತಿಳಿದು ಬಂದಿದೆ. ಇಂಡಿಯನ್ ಒಲಿಂಪಿಕ್ ಕಮಿಟಿ ಅಧ್ಯಕ್ಷ ಬತ್ರ ಈ ಪದಕವನ್ನು ತನಗೆ ಕಳುಹಿಸಿಕೊಟ್ಟ ವ್ಯಕ್ತಿಗೆ ಅದರ ಮೂಲ ಗೊತ್ತಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಏನಾದರೂ ತಪ್ಪಿದ್ದರೆ ನಾನು ಅದನ್ನು ತೆಗೆದು ಹಾಕುವೆ. ಈ ಪದಕ ಸುದ್ದಿಗೂ ಭಾರತದ ಒಲಿಂಪಿಕ್ ಕಮಿಟಿಗೂ ಯಾವುದೇ ಸಂಬಂಧ ಇಲ್ಲ ಎಂದು ಬತ್ರ ಮಾಧ್ಯಮಗಳಿಗೆ ಸ್ಪಷ್ಟೀಕರಣ ನೀಡಿದ್ದಾರೆ.












