ಸನ್ಮಾರ್ಗ ವಾರ್ತೆ
ಚೆನ್ನೈ: ನೀರು ಕುಡಿಯುವ ವೇಳೆ ಪ್ರಮಾದದಲ್ಲಿ ಕೃತಕ ಹಲ್ಲು ನುಂಗಿದ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಚೆನ್ನೈಯಲ್ಲಿ ನಡೆದಿದೆ. ಮೃತಪಟ್ಟ ಮಹಿಳೆಯನ್ನು ವಳಸರವಕ್ಕಂನ ರಾಜಲಕ್ಷ್ಮಿ ಎಂದು ಗುರುತಿಸಲಾಗಿದೆ. ಕಳೆದ ಜುಲೈ ನಾಲ್ಕರಂದು ನೀರು ಕುಡಿಯುವ ಸಂದರ್ಭದಲ್ಲಿ ಜೋಡಿಸಲಾಗಿದ್ದ ಕೃತಕ ಹಲ್ಲು ಹೊಟ್ಟೆ ಸೇರಿತ್ತು. ರಾಜಲಕ್ಷ್ಮಿಯವರು ಮೂರು ಕೃತಕ ಹಲ್ಲುಗಳಲ್ಲಿ ಒಂದನ್ನು ನೀರು ಕುಡಿಯುವ ವೇಳೆ ನುಂಗಿದ್ದರು.
ನಂತರೆ ತಲೆಸುತ್ತು , ವಾಕರಿಕೆ ಬಂದಿತ್ತು . ನಂತರ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು ಆದರೆ ಅಪಾಯ ಏನಿಲ್ಲ ಎಂದು ವೈದ್ಯರು ಹೇಳಿದ್ದರಿಂದ ಆಸ್ಪತ್ರೆಯಿಂದ ಮನೆಗೆ ಬಂದಿದ್ದರು. ಮರುದಿವಸ ಪ್ರಜ್ಞೆ ಕಳಕೊಂಡರು. ನಂತರ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಮಯದಲ್ಲಿ ನಿಧನರಾಗಿದ್ದಾರೆ. ಮೃತ ರಾಜಲಕ್ಷ್ಮಿಯವರಿಗೆ 43 ವರ್ಷ ವಯಸ್ಸಾಗಿತ್ತು.
ಸಾವಿನ ಕಾರಣ ತಿಳಿಯಲು ಮೃತದೇಹವನ್ನು ಪೋಸ್ಟ್ ಮಾರ್ಟಂಗೆ ಕಳುಹಿಸಲಾಗಿದೆ. ಐಪಿಸಿ174ನೇ ಸೆಕ್ಸನ್ ಪ್ರಕಾರ ಅಸಹಜ ಸಾವು ಕೇಸು ದಾಖಲಿಸಿಕೊಳ್ಳಲಾಗಿದೆ. ಕೃತಕ ಹಲ್ಲು ಇರಿಸಿಕೊಂಡು ಏಳು ವರ್ಷ ಆಗಿತ್ತಾದ್ದರಿಂದ ಅಪಾಯ ಆಗಿರಬಹುದೇ ಎಂದು ಪೊಲೀಸರು ಹೇಳುತ್ತಿದ್ದಾರೆ.












