ಸನ್ಮಾರ್ಗ ವಾರ್ತೆ
ವಾಷಿಂಗ್ಟನ್: ಭಾರತೀಯ ಮೂಲದ ಇಬ್ಬರು ವೈದ್ಯರನ್ನು ಪ್ರಧಾನ ಸ್ಥಾನಗಳಿಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ನೇಮಕಗೊಳಿಸಿದ್ದಾರೆ. ಇಂಡೊ ಅಮೆರಿಕನ್ ಫಿಶಿಯನ್ ವೆಸ್ಟ್ ವರ್ಜೀನಿಯದ ಮಾಜಿ ಹೆಲ್ತ್ ಕಮಿಶನರ್ ಡಾ. ರಾಹುಲ್ ಗುಪ್ತಾರನ್ನು ನ್ಯಾಶನಲ್ ಡ್ರಗ್ ಕಂಟ್ರೋಲ್ ಪಾಲಿಸಿ ಕಚೇರಿ ಮುಖ್ಯಸ್ಥರನ್ನಾಗಿಯೂ ಸರ್ಜನ್ ಮತ್ತು ಲೇಖಕ ಡಾ. ಅತುಲ್ ಗವಾಂಡರನ್ನು ಅಮೆರಿಕದ ಏಜೆನ್ಸಿಫಾರ್ ಇಂಟರ್ನ್ಯಾಶನಲ್ ಡೆವಲಪ್ಮೆಂಟ್ ಗ್ಲೋಬಲ್ ಹೆಲ್ತ್ ಬ್ಯೂರೊದ ಅಸಿಸ್ಟೆಂಟ್ ಅಡ್ಮಿಸ್ಟ್ರೇಟರ್ ಅನ್ನಾಗಿಯೂ ಬೈಡನ್ ನೇಮಿಸಿದ್ದಾರೆ.
25 ವರ್ಷಗಳಿಂದ ಫಿಶಿಸಿಯನ್ ಆಗಿ ಕೆಲಸ ಮಾಡಿದ ಗುಪ್ತಾ ವೆಸ್ಟ್ ವರ್ಜೀಯಾನದಲ್ಲಿ ಹೆಲ್ತ್ ಕಮಿಶನರ್ ಆಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ರಾಹುಲ್ ತನ್ನ 21 ವರ್ಷ ವಯಸ್ಸಿನಲ್ಲಿ ಅಮೆರಿಕಕ್ಕೆ ಬಂದಿದ್ದರು. ದಿಲ್ಲಿ ಯುನಿವರ್ಸಿಟಿಯಿಂದ ವೈದ್ಯಕೀಯ ಪದವಿ ಪಡೆದಿದವರು. 55 ವರ್ಷದ ಡಾ. ಅತುಲ್ ನ್ಯೂಯಾರ್ಕ್ ಟೈಮ್ಸ್ ಬೆಸ್ಟ್ ಸೆಲ್ಲರ್ ಆಗಿ ಆಯ್ಕೆ ಮಾಡಿದ ಪುಸ್ತಕಗಳನ್ನು ರಚಿಸಿದವರು.












