ಸನ್ಮಾರ್ಗ ವಾರ್ತೆ
ಹೊಸದಿಲ್ಲಿ : ವಾಟ್ಸಪ್ ಸಂದೇಶಗಳನ್ನು ಸಾಕ್ಷ್ಯವಾಗಿ ಪರಿಗಣಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ವ್ಯಾಪಾರ ಒಪ್ಪಂದಗಳಲ್ಲಿ ವಾಟ್ಸಪ್ ಸಂದೇಶಗಳನ್ನು ಸಾಕ್ಷ್ಯವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಚೀಫ್ ಜಸ್ಟಿಸ್ ಎನ್ವಿ ರಮಣ, ಜಸ್ಟಿಸ್ ಎಎಸ್ ಬೋಪಣ್ಣ, ಋಷಿಕೇಶ್ ರಾಯ್ರ ಪೀಠ ಹೇಳಿದೆ.
ಈ ಕಾಲದಲ್ಲಿ ವಾಟ್ಸಪ್ ಸಂದೇಶಗಳನ್ನು ಹೇಗೆ ಸಾಕ್ಷ್ಯವಾಗಿ ಪರಿಗಣಿಸಲಾಗುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲಿ ಏನನ್ನೂ ಮಾಡಿ ಡಿಲೀಟ್ ಮಾಡುವ ಪರಿಸ್ಥಿತಿ ಇದೆ ಎಂದು ಕೋರ್ಟ್ ಅಭಿಪ್ರಾಯ ನೀಡಿತು. 2016 ಡಿಸೆಂಬರ್ ಎರಡರಂದು ಒಂದು ಒಪ್ಪಂದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಈ ರೀತಿ ಹೇಳಿದೆ.
ದಕ್ಷಿಣ ದಿಲ್ಲಿಯ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ವಿವಿಧ ಕಂಪೆನಿಗಳ ಒಪ್ಪಂದದ ವಿವಾದದಲ್ಲಿ ಈ ತೀರ್ಪು ಬಂದಿದೆ. ನಗರದ ಮಾಲಿನ್ಯ ತೆಗೆಯುವ ಕುರಿತು ಒಪ್ಪಂದ ಆಗಿತ್ತು. ನಂತರ ಎಟು ಝೆಡ್, ಕ್ವಿಪೊ ದೊಂದಿಗೆ ವಿವಾದ ತಲೆದೋರಿತ್ತು. ಕೊಲ್ಕತಾ ಕೋರ್ಟಿನ ಪರಿಗಣನೆ ಬಂದಿತ್ತು. ಎ ಟು ಝೆಡ್ ಎಂಬ ಸಂಸ್ಥೆ 8.18 ಕೋಟಿ ಸಿಕ್ಕಿದೆ ಎಂದು ಸಮ್ಮತಿಸುವ ವಾಟ್ಸಪ್ ಸಂದೇಶ ಇದೆ ಎಂದು ಕ್ವಿಪೊ ಕೊಲ್ಕತಾ ಹೈಕೋರ್ಟಿನಲ್ಲಿ ವಾದಿಸಿತ್ತು. ಆದರೆ ಅದು ನಕಲಿ ಸಂದೇಶ ಎಂದು ಎಟು ಝೆಡ್ ವಾದಿಸಿತು. ನಂತರ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆಗೆ ಬಂದಿದ್ದು ಸುಪ್ರೀಂ ಕೋರ್ಟು ನಿರ್ಣಯ ಹೇಳಿದೆ.












