ಸನ್ಮಾರ್ಗ ವಾರ್ತೆ
ಕೈರೊ: ಪೊಲೀಸ್ ಅಧಿಕಾರಿಗಳ ಕೊಲೆ ಮಾಡಿದ್ದಾರೆ ಎಂದು ಎರಡು ಬೇರೆ ಬೇರೆ ಆರೋಪದಲ್ಲಿ 24 ಮುಸ್ಲಿಂ ಬ್ರದರ್‌ಹುಡ್ ಕಾರ್ಯಕರ್ತರಿಗೆ ಈಜಿಪ್ಟ್ ಕೋರ್ಟು ಮರಣದಂಡನೆ ತೀರ್ಪು ನೀಡಿದೆ.
ಅಲ್ ಅಹ್ರಾಂ ದಿನಪತ್ರಿಕೆ ವರದಿಯಂತೆ ದಾಮನ್‍ಹುರ್ ಕ್ರಿಮಿನಲ್ ಕೋರ್ಟು ಮುಸ್ಲಿಂ ಬದ್ರರ್‌ಹುಡ್‍ನ ಹದಿನಾರು ಆರೋಪಿಗಳಿಗೆ ಮರಣದಂಡನೆ ನೀಡಲು ಆದೇಶ ನೀಡಿದೆ.
ಬ್ರದರ್‌ಹುಡ್ ವಲಯ ನಾಯಕ ಮಹಮ್ಮದ್ ಸೈದಾನ್ ಮುಂತಾದವರು ಇದರಲ್ಲಿ ಸೇರಿದ್ದಾರೆ. 2015ರಲ್ಲಿ ಬೆಹ್‍ಯರ ಗವರ್ನರೇಟಿನ ರಾಶಿದ್ ನಗರದಲ್ಲಿ ನಡೆದ ಪೊಲೀಸ್ ಬಸ್ ಮೇಲೆ ಬಾಂಬಿಂಗ್‍ನಲ್ಲಿ ಇವರು ಶಾಮೀಲಾಗಿದ್ದರು ಎಂದು ಆರೋಪದಡಿಯಲ್ಲಿ ಶಿಕ್ಷೆ ತೀರ್ಪು ಬಂದಿದೆ. ಘಟನೆಯಲ್ಲಿ ಮೂವರು ಪೊಲೀಸಧಿಕಾರಿಗಳು ಹತ್ಯೆಯಾಗಿದ್ದರು. 39 ಮಂದಿ ಗಾಯಗೊಂಡಿದ್ದರೆಂದು ವರದಿಯಾಗಿತ್ತು.












